ಚಿಕ್ಕಬಳ್ಳಾಪುರ : ವಿದ್ಯಾವಂತ ಯುವಕರು ಉದ್ಯೋಗ ನೀಡಿ ಎಂದು ಕೇಳಿದರೆ ಪಕೋಡ ಮಾರಿ ಹೋಗಿ ಎಂದು ಹೇಳುತ್ತಾರೆ. ಮೋದಿ ಪ್ರಧಾನಿ ಆಗೋದಕ್ಕೆ ಲಾಯಕ್ಕಾ ಅಥವಾ ನಾಲಾಯಕ ನೀವೇ ತೀರ್ಮಾನಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಹತ್ತು ವರ್ಷಗಳಾದರೂ ಮೋದಿ ಸಾರ್ವಜನಿಕರಿಗೆ 15 ಲಕ್ಷ ರೂಪಾಯಿ ಹಾಕಿಲ್ಲ.ಚಿಕ್ಕಬಳ್ಳಾಪುರ ಜಿಲ್ಲೆಯ ಹಿಡ್ಲಘಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಜನರಿಗೆ ಭರವಸೆ ನೀಡಿದಂತೆ ನಡೆದುಕೊಂಡಿಲ್ಲ ಎಂದು ಕಿಡಿ ಕಾರಿದರು.
ವಿದ್ಯಾವಂತರು ಪಕೋಡ ಮಾರಾಟ ಮಾಡಲು ಹೋಗಿ ಅಂದಿದ್ದಾರೆ. ಮೋದಿ ಪ್ರಧಾನಿ ಆಗೋದಕ್ಕೆ ಲಾಯಕ್ಕಾ? ನಾಲಾಯಕ್? ತೀರ್ಮಾನಿಸಿ. ನಾಲಾಯಕ್ ಅಂತ ಆದ್ರೆ ನರೇಂದ್ರ ಮೋದಿಗೆ ವೋಟ್ ಹಾಕಬೇಡಿ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕೆಟ್ಟ ದಿನಗಳು ಬಂದಿವೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಕಿಡಿ ಕಾರಿದರು.