ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರದಲ್ಲಿ ಬರುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಗಂಭೀರ ಆರೋಪವೊಂದನ್ನು ಮಾಡಿದ್ದು, ಇದಕ್ಕೆ ಬಿಜೆಪಿ ಚಿಲುಮೆ ಸಂಸ್ಥೆಗೆ ಮೈತ್ರಿ ಸರ್ಕಾರ ಇದ್ದಾಗಲೇ ಅನುಮತಿ ಕೊಟ್ಟಿದ್ರು ಎಂದು ತಿರುಗೇಟು ನಿಡಿತ್ತು.
ಆದರೆ ಈ ಬಗ್ಗೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಿಎಂ ಹಾಗೂ ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.ನಮ್ಮ ಕಾಲದಲ್ಲಿ, ಇವರ ಕಾಲದಲ್ಲಿ ಇತ್ತು ಎಂದು ಕೇಳುತ್ತೀರಲ್ಲಾ, ಒಂದು ಸಂಸ್ಥೆ ದುಡ್ಡು ಇಲ್ಲದೆ ಕೆಲಸ ಮಾಡುತ್ತಿದೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಜಾಹೀರಾತು ಕೊಡದೇ, ಆ ಸಂಸ್ಥೆ ಅವರಿಗೆ ಕೊಟ್ಟಿದ್ದಾರೆ. ಅವರು ಬಿಎಲ್ ಓಗಳ ಸೋಗಿನಲ್ಲಿ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಹಾಗೂ ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ..?. ವ್ಯವಹಾರ ಎಷ್ಟು ನಡೆದಿರಬಹುದು..?. ಹಣ ಇಲ್ಲದೆ ಮಾಡುತ್ತಿದ್ದಾರೆ 8000, 10000 ಜನರನ್ನು ನೇಮಕ ಮಾಡಬೇಕಾದ್ರೆ ಎಷ್ಟು ಹಣ ಬೇಕು..?, ದಿನಕ್ಕೆ 1,500 ಕೊಡಬೇಕಾದರೇ ಎಷ್ಟು ಹಣ ಬೇಕು..!? ಅದಕ್ಕೆ ಹಿಂದಿನ ಕಾಲದಲ್ಲಿ ಆಗಿತ್ತು, ಅಂದ್ರೆ ಹೇಗೆ..?. ಮೊದಲು ಈ ಬಗ್ಗೆ ತನಿಖೆ ಮಾಡಲಿ, ನಾವು ಕೇಸ್ ದಾಖಲು ಮಾಡಿದ್ದೇವೆ ಎಂದರು.