ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಿಳಾಮಣಿಗಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಅದರಲ್ಲೂ. ಕೆಲವರ ಕುತ್ತಿಗೆಯ ಸುತ್ತ ಕಪ್ಪಗಿನ ಕಲೆ ಕಾಣಿಸಿಕೊಳ್ಳುತ್ತದೆ. . ಬೆವರಿನಿಂದ ಕೆಲವರಿಗೆ ಆಗಿದ್ದರೆ ಇನ್ನು ಕೆಲವರಿಗೆ ಬಂಗಾರ ಅಥವಾ ಬೆಳ್ಳಿ ಧರಿಸಿದವರಲ್ಲಿಯೂ ಅದು ಕಂದುವ ಮೂಲಕ ಕುತ್ತಿಗೆಯ ಭಾಗದಲ್ಲಿ ಕಪ್ಪಗೆ ಆಗುತ್ತದೆ. ಅದನ್ನು ಹೇಗೆ ಸರಿಪಡಿಸಬಹುದು ಎಂಬ ಬಗ್ಗೆ ತುಂಬಾಗೆ ತಲೆ ಕೆಡಿಸಿಕೊಂಡಿದ್ದೀರಾ? ಹಾಗಿದ್ರೆ ಈ ಆಯುರ್ವೇದ ಈ ಸಿಂಪಲ್ ಟಿಫ್ಸ್ ಫಾಲೋ ಮಾಡಿ ಇಲ್ಲಿದೆ ಓದಿ
ಕಡಲೆ ಹಿಟ್ಟಿನ ಬಳಕೆ
ಹೀಗೆ ಮಾಡಿ
ಒಂದು ಚಮಚ ಕಡಲೆ ಹಿಟ್ಟಿಗೆ ಅರ್ಧ ಚಮಚ, ಅರಿಶಿನ ಮತ್ತು ಸ್ವಲ್ಪ ಲಿಂಬು ರಸ ಹಾಗೂ ರೋಸ್ ವಾಟರ್ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಅದನ್ನು ಕಪ್ಪಾದ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ.
45 ನಿಮಿಷ ಬಿಟ್ಟು ಅದನ್ನು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕಪ್ಪಗಾಗಿರುವ ಕುತ್ತಿಗೆಯ ಭಾಗದ ಚರ್ಮ ತಿಳಿಯಾಗುತ್ತದೆ.
ಚರ್ಮವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ಆಲೂಗಡ್ಡೆಯ ಸಿಪ್ಪೆ ಸಹಾಯ ಮಾಡುತ್ತದೆ. ಅಲ್ಲದೆ ಟ್ಯಾನ್ ಆದ ಚರ್ಮವನ್ನು ಸರಿಪಡಿಸಲು, ಚರ್ಮದ ಮೇಲಿನ ಕಪ್ಪು ಕಲೆಯನ್ನು ತೆಗೆಯಲು ಸಹ ನೆರವಾಗುತ್ತದೆ.
ಹೀಗಾಗಿ ನಿಮ್ಮ ಕುತ್ತಿಗೆಯ ಭಾಗದಲ್ಲಿ ಕಪ್ಪಗಾಗಿದ್ದರೆ ಅದನ್ನು ನಿವಾರಿಸಲು ಆಲೂಗಡ್ಡೆಯ ಸಿಪ್ಪೆಯನ್ನು ಬಳಕೆ ಮಾಡಿ.
ಹೀಗೆ ಮಾಡಿ
ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ಅದನ್ನು ಕಪ್ಪಾದ ಕುತ್ತಿಗೆಯ ಭಾಗದಲ್ಲಿ 5 ನಿಮಿಷಗಳ ಕಾಲ ಉಜ್ಜಿಕೊಳ್ಳಿ.
ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಮಾಡಿ. ಇದರಿಂದ ಕ್ರಮೇಣ ಕಪ್ಪಗಾದ ಚರ್ಮ ಬಿಳಿಯಾಗುತ್ತದೆ. ಅಲ್ಲದೆ ಚರ್ಮಕ್ಕೆ ನೈಸರ್ಗಿಕ ಬ್ಲೀಚ್ ಆಗುವಂತೆ ಮಾಡುತ್ತದೆ.
ಕಿತ್ತಳೆ ಸಿಪ್ಪೆಯ ಪೌಡರ್
ಹೀಗೆ ಮಾಡಿ
ಒಂದು ಚಮಚ ಕಿತ್ತಳೆ ಸಿಪ್ಪೆಯ ಪೌಡರ್ಗೆ ಕಾಲು ಚಮಚ ಅರಿಶಿನ, ಕಾಲು ಚಮಚ ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಕಪ್ಪಾದ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳಿ. 40ರಿಂದ 45 ನಿಮಿಷ ಬಿಟ್ಟು ಅದನ್ನು ತೊಳೆದುಕೊಳ್ಳಿ. ಇದರಿಂದ ಕಪ್ಪಾದ ಕುತ್ತಿಗೆ ಸರಿಯಾಗುತ್ತದೆ.
ಚರ್ಮವನ್ನು ನೈಸರ್ಗಿಕವಾಗಿ ಬ್ಲೀಚ್ ಮಾಡಲು ನೆಲ್ಲಿಕಾಯಿ ಪುಡಿ ಸಹಾಯ ಮಾಡುತ್ತದೆ. ಹೀಗಾಗಿ ಕಪ್ಪಾದ ಚರ್ಮವನ್ನು ರಿಪೇರಿ ಮಾಡಿ, ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
ಹೀಗೆ ಮಾಡಿ
ನೆಲ್ಲಿಕಾಯಿಯ ಪುಡಿಯ ಬಳಕೆ ಕೂಡ ಕಿತ್ತಳೆ ಸಿಪ್ಪೆಯ ಪುಡಿಯ ಬಳಕೆಯಂತೇ ಆಗಿದೆ. ಒಂದಿ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಚಮಚ ಅರಿಶಿನ, ಕಾಲು ಚಮಚ ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಕಪ್ಪಾದ ಕುತ್ತಿಗೆಗೆ ಹಚ್ಚಿ ಮುಕ್ಕಾಲು ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಕ್ರಮೇಣ ಚರ್ಮ ಹೊಳೆಯುವಂತೆ ಆಗುತ್ತದೆ.