ನವದೆಹಲಿ : ಸುಮಾರು ನಾಲ್ಕು ವರ್ಷಗಳಿಂದ ದೇಶ ಕೋವಿಡ್-19 ರ ಬೆದರಿಕೆಯನ್ನ ಅನುಭವಿಸ್ತಿದೆ. ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಗಂಭೀರ ಕಾಯಿಲೆಗಳನ್ನ ಅಭಿವೃದ್ಧಿಪಡಿಸುವ ಅಪಾಯ ಕಂಡುಬಂದಿದೆ. ಆದ್ರೆ, ದೀರ್ಘಕಾಲದ ಕೋವಿಡ್ನಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಸೋಂಕಿನಿಂದ ಚೇತರಿಸಿಕೊಂಡ ಜನರಲ್ಲಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ.
ಕೋವಿಡ್-19 ಸೋಂಕಿಗೆ ಒಳಗಾದ ಜನರು ಹೃದಯರಕ್ತನಾಳದ ಕಾಯಿಲೆ ಮತ್ತು ಅದರ ತೀವ್ರ ಸ್ವರೂಪದ ಅಪಾಯದಲ್ಲಿರಬಹುದು ಎಂದು ಸಾಂಕ್ರಾಮಿಕ ನಂತರದ ಹಲವಾರು ಅಧ್ಯಯನಗಳು ಸೂಚಿಸಿವೆ. ಕೆಲವು ವರದಿಗಳಲ್ಲಿ, ಕೋವಿಡ್ ಲಸಿಕೆಗಳು ಹೃದ್ರೋಗಗಳನ್ನ ಹೆಚ್ಚಿಸುತ್ತವೆ ಎಂದು ಹೇಳಲಾಗಿದ್ದು, ಈ ಬಗ್ಗೆ ಐಸಿಎಂಆರ್ ಇಂದು ಸ್ಪಷ್ಟ ಮಾಹಿತಿಯನ್ನ ಹಂಚಿಕೊಂಡಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಲಸಿಕೆಯಿಂದಾಗಿ ಹೃದ್ರೋಗಗಳ ಅಪಾಯದ ಬಗ್ಗೆ ಆತಂಕಗಳಿವೆ ಎಂಬ ಎಲ್ಲಾ ವರದಿಗಳನ್ನ ತಳ್ಳಿಹಾಕಿದ್ದಾರೆ. “ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವಿವರವಾದ ಅಧ್ಯಯನವನ್ನ ನಡೆಸಿದ್ದು, ಇದು ಕೋವಿಡ್ -19 ಲಸಿಕೆಯೊಂದಿಗೆ ಹೃದಯಾಘಾತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತೋರಿಸುತ್ತದೆ. ಲಸಿಕೆ ಹೃದ್ರೋಗಗಳ ಅಪಾಯವನ್ನ ಹೆಚ್ಚಿಸುವುದಿಲ್ಲ ಅಥವಾ ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ. ಅಂತಹ ವಿಷಯಗಳನ್ನ ನಂಬಬೇಡಿ” ಎಂದಿದ್ದಾರೆ.
ಆರೋಗ್ಯ ಸಚಿವರು ಹೇಳಿದ್ದೇನು.?
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆರೋಗ್ಯ ಸಚಿವರು, “ವಿಶ್ವಾದ್ಯಂತ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕಕಾರಿ. ವ್ಯಕ್ತಿಯ ಅಸ್ವಸ್ಥ ಜೀವನಶೈಲಿ ಮತ್ತು ಆಲ್ಕೋಹಾಲ್-ಧೂಮಪಾನದಂತಹ ಅಭ್ಯಾಸಗಳು ಈ ಅಪಾಯದ ಅಂಶವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಲಸಿಕೆ ಹೃದಯಾಘಾತದ ಅಪಾಯವನ್ನ ಉಂಟು ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವರು, ಕೋವಿಡ್ -19 ಲಸಿಕೆಗಳ ಬಗ್ಗೆ ತಪ್ಪು ಕಲ್ಪನೆಗಳನ್ನ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಇಂದು ಯಾರಿಗಾದರೂ ಪಾರ್ಶ್ವವಾಯು ಬಂದರೆ, ಅದು ಕೋವಿಡ್ -19 ಲಸಿಕೆಯಿಂದಾಗಿ ಎಂದು ಕೆಲವರು ಭಾವಿಸುತ್ತಾರೆ. ಐಸಿಎಂಆರ್ ಈ ಬಗ್ಗೆ ವಿವರವಾದ ಅಧ್ಯಯನವನ್ನ ನಡೆಸಿದ್ದು, ಲಸಿಕೆ ಹೃದಯದ ಆರೋಗ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ಕಂಡುಹಿಡಿದಿದೆ ಎಂದು ಸ್ಪಷ್ಟ ಪಡೆಸಿದರು.
ಲೋಕಸಭಾ ಚುನಾವಣೆಗೆ ‘195 ಬಿಜೆಪಿ ಅಭ್ಯರ್ಥಿ’ಗಳ ಮೊದಲ ಪಟ್ಟಿ ಪ್ರಕಟ: ಯಾವ ರಾಜ್ಯಕ್ಕೆ ಎಷ್ಟು ಸೀಟು? ಇಲ್ಲಿದೆ ಮಾಹಿತಿ
ರಾಜ್ಯದ ‘1,80,253 ಬಡ ಕುಟುಂಬ’ಗಳಿಗೆ ಮನೆ ಕಲ್ಪಿಸುವುದಾಗಿ ‘ಸಿಎಂ ಸಿದ್ಧರಾಮಯ್ಯ’ ಘೋಷಣೆ