ನವದೆಹಲಿ : ಸೋಮವಾರ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಆಡಳಿತಾರೂಢ ಸರ್ಕಾರದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಸಂಸದರು “ಬೇಜವಾಬ್ದಾರಿಯುತ ಹೇಳಿಕೆಗಳನ್ನು” ನೀಡಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ವಿರೋಧ ಪಕ್ಷದ ನಾಯಕ ಬಹಳ ಜವಾಬ್ದಾರಿಯುತ ಹುದ್ದೆ. ರಾಹುಲ್ ಜಿ ಮೊದಲ ಬಾರಿಗೆ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ, ಆದರೆ ಇಂದು ಅವರು ಬೇಜವಾಬ್ದಾರಿಯುತ ಹೇಳಿಕೆಗಳನ್ನ ನೀಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಅಗ್ನಿಪಥ್ ಯೋಜನೆಯ ಬಗ್ಗೆ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸಶಸ್ತ್ರ ಪಡೆಗಳಿಗೆ ಪ್ರವೇಶಕ್ಕಾಗಿ ಅಗ್ನಿಪಥ್ ಯೋಜನೆಯ ಬಗ್ಗೆ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದರು. ರಾಹುಲ್ ಗಾಂಧಿ ಹೇಳಿಕೆಗೆ ಅಶ್ವಿನಿ ವೈಷ್ಣವ್ ಕಿಡಿಕಾರಿದ್ದಾರೆ.
“ಅವರು (ರಾಹುಲ್ ಗಾಂಧಿ) ಇಂದು ಸಂಸತ್ತಿನಲ್ಲಿ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಅಗ್ನಿವೀರ್ ಯೋಜನೆಯಡಿ ಹುತಾತ್ಮರಿಗೆ ಪರಿಹಾರ ಸಿಗುವುದಿಲ್ಲ ಎಂದು ಅವರು ಹೇಳಿದರು. ಅಗ್ನಿವೀರ್ ಯೋಜನೆಯಲ್ಲಿ 1 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಈ ವಿಷಯವನ್ನ ಅನೇಕ ಬಾರಿ ಎತ್ತಿದೆ ಮತ್ತು ಸುಳ್ಳು ನಿರೂಪಣೆಯನ್ನ ಸೃಷ್ಟಿಸಲು ಪ್ರಯತ್ನಿಸಿದೆ” ಎಂದು ಅವರು ಹೇಳಿದರು.
#WATCH | On Congress MP Rahul Gandhi's speech in Parliament, Union Minister Ashwini Vaishnaw says, "The position of Leader of Opposition is a very responsible position…Rahul ji has taken up a responsibility for the first time but despite taking up responsibility for the first… pic.twitter.com/9pzag4gJn6
— ANI (@ANI) July 1, 2024
BREAKING : ‘UPSC CSE ಪ್ರಿಲಿಮ್ಸ್’ ಫಲಿತಾಂಶ ಪ್ರಕಟ ; ನಿಮ್ಮ ರಿಸಲ್ಟ್ ಚೆಕ್ ಮಾಡಲು ಈ ಹಂತ ಅನುಸರಿಸಿ!
BREAKING : ಗಾಯದ ಸಮಸ್ಯೆ ; ‘ಪ್ಯಾರಿಸ್ ಡೈಮಂಡ್ ಲೀಗ್’ನಿಂದ ಜಾವೆಲಿನ್ ಸ್ಟಾರ್ ‘ನೀರಜ್ ಚೋಪ್ರಾ’ ಹೊರಕ್ಕೆ