ನವದೆಹಲಿ : 2022ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಸೋಲುಂಡ ಬಳಿಕ ಅನೇಕ ಪ್ರತಿಕ್ರಿಯೆಗಳು ಬಂದವು. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಭಾರತ ತಂಡವನ್ನ ನಿಂದಿಸಿ ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ಸಧ್ಯ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಶಹಬಾಜ್ ಷರೀಫ್ ಟ್ವೀಟ್ಗೆ ಪ್ರತಿಕ್ರಿಯಿಸಿ ಬಾಯಿ ಮುಚ್ಚಿಸಿದ್ದಾರೆ.
ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ನಂತರ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಟ್ವೀಟ್ ಮಾಡಿದ್ದು, ಇದೇ ಭಾನುವಾರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪೈಪೋಟಿ ನಡೆಸಲಿವೆ. ಆದ್ರೆ, ಇದು ಭಾನುವಾರ 152/0 ವಿರುದ್ಧ 170/0 ಪಂದ್ಯ ನಡೆಯಲಿದೆ ಎಂದು ಶಹಬಾಜ್ ಷರೀಫ್ ವ್ಯಂಗ್ಯವಾಗಿ ಬರೆದಿದ್ದಾರೆ. ವಾಸ್ತವವಾಗಿ, ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನವು ಭಾರತವನ್ನ 10 ವಿಕೆಟ್ಗಳಿಂದ ಸೋಲಿಸಿತು ಮತ್ತು ಈ ವರ್ಷ ಇಂಗ್ಲೆಂಡ್ ಭಾರತವನ್ನ 10 ವಿಕೆಟ್ಗಳಿಂದ ಸೋಲಿಸಿತು.
ಶಹಬಾಜ್ ಷರೀಫ್ ಈ ಟ್ವೀಟ್’ಗೆ ಪ್ರತಿಕ್ರಿಯಿಸಿ ಇರ್ಫಾನ್ ಪಠಾಣ್, “ಇದೇ ನಮ್ಮ ಮತ್ತು ನಿಮ್ಮ ನಡುವೆ ಇರುವ ವ್ಯತ್ಯಾಸವಾಗಿದೆ. ನಮ್ಮೊಂದಿಗೆ ನಾವು ಸಂತೋಷವಾಗಿದ್ದೇವೆ. ಬೇರೊಬ್ಬರ ಸೋಲಿನಲ್ಲಿ ನೀವು ಸಂತೋಷಪಡುತ್ತಿದ್ದೀರಿ. ಆದ್ದರಿಂದಲೇ ನೀವು ನಿಮ್ಮ ದೇಶದ ಪರಿಸ್ಥಿತಿಯನ್ನ ಉತ್ತಮಪಡಿಸುವತ್ತ ಗಮನಹರಿಸುತ್ತಿಲ್ಲ” ಎಂದು ತಿವಿದಿದ್ದಾರೆ. ಇರ್ಫಾನ್ ಪಠಾಣ್ ಅವ್ರ ಈ ಟ್ವೀಟ್ ವೈರಲ್ ಆಗಿದ್ದು, ಭಾರತೀಯ ಅಭಿಮಾನಿಗಳು ಇದನ್ನ ಸಾಕಷ್ಟು ಶ್ಲಾಘಿಸಿದ್ದಾರೆ.
Aap mein or hum mein fark yehi hai. Hum apni khushi se khush or aap dusre ke taklif se. Is liye khud ke mulk ko behtar karne pe dhyan nahi hai.
— Irfan Pathan (@IrfanPathan) November 12, 2022
ಇದು ಡಬಲ್ ಇಂಜಿನ್ ಸರ್ಕಾರವಲ್ಲ, ಟ್ರಬಲ್ ಇಂಜಿನ್ ಸರ್ಕಾರ: ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿ