ಇರಾನ್: ಹಾಲಿವುಡ್ ನಟಿ ಏಂಜೆಲಿಯಾ ಜೋಲಿ(Zombie Angelina Jolie)ಯನ್ನು ಹೋಲುವ ಸ್ಪೂಕಿ ಫೋಟೋಗಳನ್ನು ಪೋಸ್ಟ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಫೇಮಸ್ ಆಗಿದ್ದ ಇರಾನ್ ಮಹಿಳೆ ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ನೈಜ ಮುಖವನ್ನು ಬಹಿರಂಗಪಡಿಸಿದ್ದಾರೆ.
ಸಹರ್ ತಬರ್ ಅವರನ್ನು 2019 ರ ಅಕ್ಟೋಬರ್ನಲ್ಲಿ ಭ್ರಷ್ಟಾಚಾರ ಮತ್ತು ದೇವನಿಂದನೆ ಆರೋಪದ ಮೇಲೆ ಬಂಧಿಸಲಾಯಿತು ಮತ್ತು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ, ಕಳೆದ ತಿಂಗಳು ಮಹ್ಸಾ ಅಮಿನಿಯ ಸಾವಿನಿಂದ ಪ್ರಚೋದಿಸಲ್ಪಟ್ಟ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ 14 ತಿಂಗಳಿಗೇ ಆಕೆಯನ್ನು ಬಿಡುಗಡೆ ಮಾಡಲಾಯಿತು. ತಬರ್ ಅವರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿ ಹರಡಿತ್ತು. ಇದು ಆಕೆಯನ್ನು ಏಂಜಲೀನಾ ಜೋಲಿಯ ಸ್ಪೂಕಿಯಂತೆ ಕಾಣುವಂತೆ ಮಾಡಿದೆ. ತಬರ್ ಬಿಡುಗಡೆಯಾದ ನಂತರ ಅಂತಿಮವಾಗಿ ಈ ವಾರ ಕ್ಯಾಮೆರಾ ಕಣ್ಣಿಗೆ ತಮ್ಮ ಮುಖದ ನೈಜತೆಯನ್ನು ಬಹಿರಂಗಪಡಿಸಿದ್ದಾರೆ.
ಆಕೆಯ ಬಿಡುಗಡೆಗಾಗಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದರು. ಅವರಲ್ಲಿ ಕಾರ್ಯಕರ್ತ ಮಸಿಹ್ ಅಲಿನೆಜಾದ್ ಕೂಡ ಇದ್ದಾರೆ. ತಬರ್ ಜೈಲಿನಲ್ಲಿದ್ದಾಗ, ಅಲಿನೇಜಾದ್ ಅವರು ಟ್ವೀಟ್ ಮಾಡಿ, ʻಸಹರ್ ತಬರ್ ಅವರಿಗೆ ಕೇವಲ 19 ವರ್ಷ. ಅವಳ ತಮಾಷೆ ಅವಳನ್ನು ಜೈಲಿಗೆ ತಳ್ಳಿತು. ಅವಳ ತಾಯಿ ತನ್ನ ಮುಗ್ಧ ಮಗಳನ್ನು ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆʼ ಎಂದು ಪೋಸ್ಟ್ ಮಾಡಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ, ʻತಬರ್ ಅವರ ಮೂಗು, ಲಿಪ್ ಮತ್ತು ಲಿಪೊಸಕ್ಷನ್ನಂತಹ ಕೆಲವು ಕಾಸ್ಮೆಟಿಕ್ ಕಾರ್ಯವಿಧಾನಗಳಿಗೆ ಒಳಗಾಗಿದ್ದೇನೆ ಎಂದು ಹೇಳಿದರು. ಆದರೆ, ಫೋಟೋಶಾಪ್ನಲ್ಲಿ ಮೇಕಪ್ ಮತ್ತು ಎಡಿಟಿಂಗ್ ಮೂಲಕ ನನ್ನ ಭಾವಚಿತ್ರವಿರುವ ಫೋಟೋವನ್ನು ಜೊಂಬಿ ಏಂಜಲೀನಾ ಜೋಲೀ ರೀತಿ ಎಡಿಟ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ನೀವು ನೋಡಿದ್ದು ನಾನು ಚಿತ್ರವನ್ನು ರಚಿಸಲು ಬಳಸಿದ ಕಂಪ್ಯೂಟರ್ ಎಫೆಕ್ಟ್ಗಳುʼ ಎಂದು ತಬರ್ ಹೇಳಿದ್ದಾರೆ.