ದುಬೈ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ದೇಶದ ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಇರಾನ್ ನ ವಾಯುವ್ಯ ಭಾಗದ ಪರ್ವತ ಪ್ರದೇಶಗಳಲ್ಲಿ ಅಪಘಾತಕ್ಕೀಡಾಗಿದ್ದು, ಮಂಜಿನಿಂದ ಆವೃತವಾದ ಜಾಗಗದಲ್ಲಿ ಭಾರಿ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಈ ನಡುವೆ “ರೆಡ್ ಕ್ರೆಸೆಂಟ್ ಶೋಧ ಮತ್ತು ಪಾರುಗಾಣಿಕಾ ತಂಡಗಳು ಅಧ್ಯಕ್ಷರನ್ನು ಹೊತ್ತ ಹೆಲಿಕಾಪ್ಟರ್ ಅಪಘಾತದ ಸ್ಥಳಕ್ಕೆ ತಲುಪಿವೆ” ಎಂದು ಇರಾನಿನ ರೆಡ್ ಕ್ರೆಸೆಂಟ್ ಹೇಳಿಕೆಯಲ್ಲಿ ತಿಳಿಸಿದೆ.
ರೈಸಿ ಅವರ ಹೆಲಿಕಾಪ್ಟರ್ ಅನ್ನು ರಕ್ಷಣಾ ತಂಡಗಳು ಪತ್ತೆ ಮಾಡಿವೆ ಎಂದು ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಹಲವಾರು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
ಅಧ್ಯಕ್ಷರು ಮತ್ತು ಅವರ ಸಹಚರರು ಬದುಕುಳಿದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ರೆಡ್ ಕ್ರೆಸೆಂಟ್ ಮಾಹಿತಿಯನ್ನು ನೀಡಿಲ್ಲ.
The first video of the area where the wreckage of President Raisi’s chopper was found. Relief and rescue workers will arrive at the scene shortly. pic.twitter.com/O9p4duWzmB
— Iran International English (@IranIntl_En) May 20, 2024