ಇರಾನ್ : ಕಜಿಕಿಸ್ತಾನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಹಿಜಾಬ್ ಮತ್ತು ಹೆಡ್ ಸ್ಕಾರ್ಫ್ ಧರಿಸದೆ ಭಾಗವಹಿಸಿದ ಹಿನ್ನೆಲೆಯಲ್ಲಿ ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರಿಗೆ ತಾಯ್ನಾಡು ಇರಾನಿಗೆ ಹಿಂದಿರುಗಂತೆ ಇರಾನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರಿಗೆ ಇರಾನ್ ಗೆ ಹಿಂದಿರುಗದಂತೆ ಬೆದರಿಕೆಗಳು ಬರುತ್ತಿಯಂತೆ ಎಂದು ಘಟನೆಯ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಕಜಿಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಖದೇಮ್ ಹಿಜಾಬ್ ಧರಿಸಿದೆ ಭಾಗವಹಿಸಿದ್ದರು. ಇರಾನ್ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಹಿಜಾಬ್ ಕಡ್ಡಾಯವಾಗಿ ವಿಧಿಸಲಾಗಿದೆ.
ಖದೇಮ್ಗೆ ಹಲವು ಫೋನ್ ಕರೆಗಳು ಬರುತ್ತಿದ್ದು, ಇದರಲ್ಲಿ ವ್ಯಕ್ತಿಗಳು ಪಂದ್ಯಾವಳಿಯ ನಂತರ ಮನೆಗೆ ಹಿಂದಿರುಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಇತ್ತ ಇರಾನ್ ನಲ್ಲಿರುವ ಆಟಗಾರ್ತಿಯ ಪೋಷಕರು ಮತ್ತು ಸಂಬಂಧಿಕರು ಬೆದರಿಕೆಗಳು ಬಂದಿದ್ದವು ಎಂದು ತಿಳಿದು ಬಂದಿದೆ.
ಆಟಗಾರ್ತಿಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಕಜಕಿಸ್ತಾನ ಪೊಲೀಸರ ಸಹಕಾರದೊಂದಿಗೆ ಭದ್ರತೆಯನ್ನು ಒದಗಿಸಿದೆ. ನಾಲ್ಕು ಅಂಗರಕ್ಷಕರನ್ನು ಖದೇಮ್ ಅವರು ತಂಗಿರುವ ಹೋಟೆಲ್ ಕೋಣೆಯ ಹೊರಗೆ ರಕ್ಷಣೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಿಕೆಟ್ ಮಾಹಿತಿಗಾಗಿ ‘IRCTC’ಗೆ ಟ್ವೀಟ್ ಮಾಡಿದ ಮಹಿಳೆ ಖಾತೆಯಿಂದ 64 ಸಾವಿರ ರೂಪಾಯಿ ಕಟ್; ಆಗಿದ್ದೇನು ಗೊತ್ತಾ?
ಈ ವಿಷಯಗಳ ಬಗ್ಗೆ ಮಾತನಾಡಿ ನಿಮ್ಮ, ಧಮ್ಮು ತಾಕತ್ತು ತೋರಿಸಿ : ಕಟೀಲ್ ಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್