ಇರಾನ್ : ಇರಾನ್ನ ಉತ್ತರ ಟೆಹ್ರಾನ್ನ ಎವಿನ್ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಕೈದಿಗಳು ಸಾವನ್ನಪ್ಪಿದ್ದು, 61 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ ಜೈಲಿನೊಳಗೆ ಇನ್ನೂ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೈಲಿನ ಬಟ್ಟೆಗಳ ಗೋದಾಮಿಗೆ ಪುಂಡರು ಬೆಂಕಿ ಹಚ್ಚಿದ್ದಾರೆ ಎಂದು ಇರಾನ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನಾ ಸ್ಥಳದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವೀಡಿಯೊಗಳಲ್ಲಿ, ಜೈಲಿನಲ್ಲಿ ದಟ್ಟವಾದ ಹೊಗೆ ಹೊರ ಹೊಮ್ಮುವುದನ್ನು ನೋಡಬಹುದು.
ಈಗಾಗಲೇ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಈಗ ಜೈಲಿನ ಪರಿಸ್ಥಿತಿಯು ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಮತ್ತು ಜೈಲು ಸಂಕೀರ್ಣದಲ್ಲಿ ಶಾಂತಿಯನ್ನು ಕಾಪಾಡಲಾಗಿದೆ ಮತ್ತು ಜೈಲಿನ ಸುತ್ತಲಿನ ಬೀದಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಟೆಹ್ರಾನ್ನ ಗವರ್ನರ್ ಮೊಹ್ಸೆನ್ ಮನ್ಸೌರಿ ಹೇಳಿದ್ದಾರೆ.
BIGG NEWS : ಇಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಸೇರಿ 39 ಮಂದಿ ಮತದಾನ
BIG BREAKING NEWS: ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ಎಂದೇ ಖ್ಯಾತರಾಗಿದ್ದ `ಕಲ್ಮನೆ ಕಾಮೇಗೌಡʼ ಇನ್ನಿಲ್ಲ