ಟೆಹ್ರಾನ್ (ಇರಾನ್): ಇರಾನ್ನ ಕಟ್ಟುನಿಟ್ಟಾದ ಹಿಜಾಬ್ ನಿಯಮಗಳನ್ನು ಜಾರಿಗೊಳಿಸಲು ಮೀಸಲಾದ ಘಟಕ ಇರಾನ್ನ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಯುವತಿ ಮಹ್ಸಾ ಅಮಿನಿ ಎಂಬಾಕೆ ಕೋಮಾಕ್ಕೆ ಜಾರಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಈ ಘಟನೆ ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಹುಟ್ಟಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಅಮಿನಿ ಸಹೋದರ ಕಿಯಾರಾಶ್, ʻಮಹ್ಸಾ ಅಮಿನಿ ತನ್ನ ಕುಟುಂಬದೊಂದಿಗೆ ಟೆಹ್ರಾನ್ಗೆ ಭೇಟಿ ನೀಡುತ್ತಿದ್ದಾಗ ವಿಶೇಷ ಪೊಲೀಸ್ ಘಟಕದಿಂದ ಆಕೆಯನ್ನು ಬಂಧಿಸಲಾಯಿತು. ಮಧ್ಯಪ್ರವೇಶಿಸಿದರೂ ನನ್ನ ಸಹೋದರಿಯನ್ನು ಶಿಕ್ಷೆಗೆ ಒಳಪಡಿಸಿದರು. ಸ್ವಲ್ಪ ಸಮಯದ ನಂತರ, ಆಕೆಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಗೆ ಹೃದಯಾಘಾತವಾಗಿದೆ ಎಂದಿದ್ದಾರೆ ಎಂದು ತಿಳಿಸಿದರು.
ಅಮಿನಿ ಸಾವಿಗೆ ಮೂರು ದಿನಗಳ ಹಿಂದೆ ಹಿಜಾಬ್ ವಿರುದ್ಧ ಹೋರಾಟಕ್ಕೆ ಅಮಿನಿ ಬೆಂಬಲ ಸೂಚಿಸಿದ್ದರಿಂದ ನಿರಂಕುಶವಾಗಿ ಅವಳನ್ನು ಬಂಧಿಸಿದ್ದರು.
ಘಟನೆ ಬೆಳಕಿಗೆ ಬಂದ ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ನಂತ್ರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಕರಣದ ತನಿಖೆಯನ್ನು ತೆರೆಯುವಂತೆ ಆಂತರಿಕ ಸಚಿವರಿಗೆ ಆದೇಶಿಸಿದರು.
ಔಪಚಾರಿಕವಾಗಿ ಗಶ್ಟ್-ಇ ಇರ್ಷಾದ್ (ಮಾರ್ಗದರ್ಶನ ಗಸ್ತು) ಎಂದು ಕರೆಯಲ್ಪಡುವ ನೈತಿಕತೆಯ ಪೋಲೀಸರ ನಡವಳಿಕೆಯ ಕುರಿತು ಇರಾನ್ನ ಒಳಗೆ ಮತ್ತು ಹೊರಗೆ ಬೆಳೆಯುತ್ತಿರುವ ವಿವಾದದ ಮಧ್ಯೆ ಅಮಿನಿಯ ಸಾವಾಗಿದೆ. ಇರಾನ್ ಮುಸ್ಲಿಮರು ಮಾತ್ರವಲ್ಲದೆ ಅಲ್ಲಿನ ಎಲ್ಲಾ ಧರ್ಮಗಳಿಗೆ ಡ್ರೆಸ್ ಕೋಡ್ ಕಡ್ಡಾಯ.
ಮಹಿಳೆಯರು ತಮ್ಮ ಮುಖವನ್ನು ಬಿಟ್ಟು ತಲೆ ಮತ್ತು ಕುತ್ತಿಗೆಯನ್ನು ಮರೆಮಾಡಬೇಕು ಎಂದು ಅಲ್ ಜಜೀರಾ ವರದಿ ಮಾಡಿದೆ.
ಜಾರ್ಖಂಡ್ನಲ್ಲಿ ಘೋರ ಘಟನೆ: ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಗರ್ಭಿಣಿ ಮಹಿಳೆ ಸಾವು
BIGG NEWS : ರಾಜ್ಯ ಸರ್ಕಾರದಿಂದ `ವಲಸೆ ಕಾರ್ಮಿಕರಿಗೆ’ ಸಿಹಿಸುದ್ದಿ : 7 ಕಡೆ `ಟ್ರಾನ್ಸಿಟ್ ಮನೆ’ಗಳ ನಿರ್ಮಾಣ