ಬೆಂಗಳೂರು: ರಾಜ್ಯ ಸರ್ಕಾರದಿಂದ ಅಗ್ನಿಶಾಮಕ ದಳದ ಡಿಜಿಪಿಯಾಗಿ IPS ಅಧಿಕಾರಿ ಮಾಲಿನಿ ಕೃಷ್ಣಮೂರ್ತಿಯನ್ನು ನೇಮಕ ಮಾಡಿ ಆದೇಶಿಸಿದೆ. ಈ ಮೂಲಕ ಇನ್ಮುಂದೆ ಅಗ್ನಿಶಾಮಕ ದಳದ ಡಿಜಿಪಿಯಾಗಿ ಮಾಲಿನಿ ಕೃಷ್ಣಮೂರ್ತಿ ಕಾರ್ಯನಿರ್ವಹಿಸಲಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಮಲ್ ಪಂತ್ ಅವರ ನಿವೃತ್ತಿಯಿಂದ ತೆರವಾದಂತ ಅಗ್ನಿ ಶಾಮಕ ದಳದ ಡಿಜಿಪಿಯಾಗಿ ಮಾಲಿನಿ ಕೃಷ್ಣಮೂರ್ತಿಯನ್ನು ನೇಮಕ ಮಾಡಿ ಆದೇಶಿಸಿದೆ.
ಮಾಲಿನಿ ಕೃಷ್ಣಮೂರ್ತಿಯವರು ಅಗ್ನಿಶಾಮಕ ದಳ, ಎಸ್ ಡಿ ಆರ್ ಎಫ್, ಹೋಂ ಗಾರ್ಡ್ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
1993 ಬ್ಯಾಚ್ IPS ಅಧಿಕಾರಿಯಾಗಿ ಪೊಲೀಸ್ ಇಲಾಖೆ ಸೇರಿದ್ದ ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಕಾರಗೃಹ ಇಲಾಖೆ DGPಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ರಾಜ್ಯದ ದಕ್ಷ ಹಾಗೂ ಪ್ರಾಮಾಣಿಕ ಮಹಿಳಾ ಅಧಿಕಾರಿಯಾಗಿದ್ದಾರೆ.
ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಹಣವಿಲ್ಲ: ಬೊಮ್ಮಾಯಿ ಗಂಭೀರ ಆರೋಪ
BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’