ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ಕಾರಣದಿಂದ ಐಪಿಎಲ್ 2025ರ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಬಿಸಿಸಿಐ ಇನ್ನಳಿದ ಐಪಿಎಲ್ 2025ರ ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ.
ಐಪಿಎಲ್ 2025 ರ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ನಡೆಯುತ್ತಿರುವ ಸೀಸನ್ ಮೇ 17 ರಂದು ಪುನರಾರಂಭಗೊಳ್ಳಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ.
ಐಪಿಎಲ್ 2025 ಪರಿಷ್ಕೃತ ವೇಳಾಪಟ್ಟಿ ವಿವರರ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಎಲ್ಲಾ ಪದಾಧಿಕಾರಿಗಳು, ಪಾಲುದಾರರು ಮತ್ತು ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ, ಐಪಿಎಲ್ 2025 ಪರಿಷ್ಕೃತ ವೇಳಾಪಟ್ಟಿಯ ಬಗ್ಗೆ ಗಮನಹರಿಸಿದೆ.
ಐಪಿಎಲ್ 2025 ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಲೀಗ್‌ನ ಉಳಿದ ಪಂದ್ಯಗಳು ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಅಹಮದಾಬಾದ್ ಮತ್ತು ಮುಂಬೈನಲ್ಲಿ ನಡೆಯಲಿವೆ. ಅಲ್ಲದೆ, ಪ್ಲೇಆಫ್‌ಗಳ ಸ್ಥಳಗಳನ್ನು ನಂತರದ ದಿನಾಂಕದಂದು ಘೋಷಿಸಲಾಗುತ್ತದೆ.
ಐಪಿಎಲ್ 2025 ರ ಸಂಪೂರ್ಣ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ: