ಉಜಿರೆ: ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಕೈಗೊಳ್ಳುವಂತ ಆಕಾಂಕ್ಷಿಗಳಿಗೆ ಉಚಿತವಾಗಿ ಪೋಟೋಗ್ರಫಿ, ವೀಡಿಯೋಗ್ರಫಿ ತರಬೇತಿ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ದಿನಾಂಕ 12-08-2025ರಿಂದ 10-09-2025ರವರೆಗೆ 30 ದಿನಗಳ ಕಾಲ ಈ ತರಬೇತಿಯನ್ನು ನೀಡಲಾಗುತ್ತದೆ. 18 ರಿಂದ 45 ವರ್ಷದೊಳಗಿನವರು ಉಚಿತ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ಮತ್ತು, ಉದ್ಯೋಗ ಕೈಗೊಳ್ಳಲು ಟೂಲ್ ಕಿಟ್ ಅನ್ನು ಉಚಿತವಾಗಿ ನೀಡಲಾಗುತ್ತದೆ.
ನಿಮ್ಮ ಸ್ವ ವಿವರವನ್ನು 6364561982ಗೆ ವಾಟ್ಸ್ ಆಪ್ ಮಾಡಿ. ಹೆಚ್ಚಿನ ಮಾಹಿತಿಗಾಗಿ 9980885900, 9380626695, 8861514706, 8296770307, 9591044014 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಧರ್ಮಸ್ಥಳ ಕೇಸಿನ ಮುಸುಕುಧಾರಿಯ ಹೆಸರು ಬಹಿರಂಗಪಡಿಸಿ, ‘NIA ತನಿಖೆ’ಗೆ ವಹಿಸಿ: ಆರ್.ಅಶೋಕ ಆಗ್ರಹ