ಬೆಂಗಳೂರು: 2025-26ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ (ಎಂಡಿಎಸ್) ಪ್ರವೇಶಕ್ಕೆ ಅರ್ಹರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೆಇಎ ವೆಬ್ ಸೈಟ್ ನಲ್ಲಿ ಲಿಂಕ್ ಬಿಟ್ಟಿದ್ದು, ಜೂನ್ 29ರವರಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಜೂನ್ 30 ಕೊನೆ ದಿನ ಎಂದು ಪ್ರಸನ್ನ ತಿಳಿಸಿದ್ದಾರೆ.
ಮೂಲ ದಾಖಲೆಗಳ ಪರಿಶೀಲನೆ ಜೂನ್ 30ರಿಂದ ನಡೆಯಲಿದ್ದು, ಇದಕ್ಕೆ 27ರಂದು ಮುಂಗಡ ದಿನಾಂಕ ನಿಗದಿಗೆ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕ್ಲಾಸ್ ಎ ಮತ್ತು ವೈ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ. ಒಂದು ವೇಳೆ ಅವರು ಎನ್ ಆರ್ ಐ ವಾರ್ಡ್ ಅಥವಾ ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಕೋರಿದ್ದಲ್ಲಿ ಮಾತ್ರ ಅಂತಹವರು ದಾಖಲೆ ಪರಿಶೀಲನೆ ಗೆ ಬರಬೇಕಾಗುತ್ತದೆ. ಉಳಿದಂತೆ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಝೆಡ್ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಸ್ಲಾಟ್ ಬುಕ್ ಮಾಡಿಕೊಂಡು ದಾಖಲೆ ಪರಿಶೀಲನೆಗೆ ಬರಬೇಕು ಎಂದು ಅವರು ವಿವರಿಸಿದ್ದಾರೆ.
ದೊಡ್ಡರಂಗೇಗೌಡ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ: ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವುದಾಗಿ ಘೋಷಣೆ
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut