ಮೈಸೂರು: ಅಂಧರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ಸುಗಳ ನಂತ್ರ ಮೈಸೂರು ನಗರ ಸಾರಿಗೆಯ ಬಸ್ಸುಗಳಲ್ಲೂ ಆನ್‌ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದೆ. ಆನ್‌ಬೋರ್ಡ್ ಸಾಧನವು ದೃಷ್ಟಿ ಸಮಸ್ಯೆಯ ವ್ಯಕ್ತಿಗಳಿಗೆ ಬಸ್ ಮಾರ್ಗ ಸಂಖ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವರು ಆ ಸಾಧನದಲ್ಲಿ ಸಂಖ್ಯೆ ಒತ್ತಿದಾಗ ಬಸ್‌ನಲ್ಲಿ ಅಳವಡಿಸಿದ್ದ ಮೌಂಟೆಡ್ ಸ್ಪೀಕರ್ ಧ್ವನಿ ಹೊರಡಿಸುತ್ತದೆ. ಇದು ಬಸ್‌ನ ಚಾಲಕ ಮತ್ತು ನಿರ್ವಾಹಕರಿಗೂ ಮಾಹಿತಿ ನೀಡುವುದರಿಂದ ಅವರನ್ನು ಬಸ್ ಹತ್ತಿಸಲು ಸಹಾಯ ಮಾಡುತ್ತಾರೆ. ಅಲ್ಲದೇ ಇದೇ ಧ್ವನಿಯ ಆಧಾರದಲ್ಲಿ ಆ ವ್ಯಕ್ತಿಗಳು ಕೂಡ ಬಸ್‌ನ ಬಾಗಿಲಿನತ್ತ ಬರಲು ಉಪಯೋಗವಾಗುತ್ತದೆ. ಇಳಿಯಬೇಕಾದ ಸ್ಥಳದಲ್ಲಿಯೂ ಬಟನ್ ಒತ್ತಿದರೆ ಅವರನ್ನು ಸುರಕ್ಷಿತವಾಗಿ ಇಳಿಸಲು ಅನುಕೂಲವಾಗಲಿದೆ.
ಇಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು, ಬೆಂಗಳೂರು ನಂತರ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಭಾರತ ಹಾಗೂ ಜರ್ಮನಿ ಸರ್ಕಾರದ ನಡುವಿನ ಅರ್ಬನ್ ಮೊಬಿಲಿಟಿ ಸಹಭಾಗಿತ್ವದಲ್ಲಿ, GIZ ಕಂಪನಿಯ ಹಣಕಾಸು ನೆರವಿನಿಂದ ದೃಷ್ಟಿ ವಿಶೇಷ ಚೇತನರಿಗೆ 200 ಬಸ್ಸುಗಳಲ್ಲಿ,
ಅವರ ಆಯ್ಕೆಯ ಬಸ್ ಮಾರ್ಗವನ್ನು ಸೆಲೆಕ್ಟ್ ಮಾಡಲು. ಧ್ವನಿ ಸ್ಪಂದನ ಎಂಬ ಯೋಜನೆಗೆ ಚಾಲನೆಯನ್ನು ನೀಡಿದರು.
ರೇಸ್ಡ್ ಲೈನ್ಸ್ ಫೌಂಡೇಶನ್ ಮತ್ತು ಐಐಟಿ ದೆಹಲಿ ಅಭಿವೃದ್ಧಿಪಡಿಸಿರುವ ಈ ಉಪಕರಣವು ದೃಷ್ಟಿ ವಿಶೇಷ ಚೇತನ ವ್ಯಕ್ತಿಗಳು ಸಾರ್ವಜನಿಕ ಬಸ್ಸುಗಳನ್ನು ಹತ್ತಲು ಸಹಾಯ ಮಾಡುವ ಸಾಧನವಾಗಿರುತ್ತದೆ. ಇದು ದೃಷ್ಟಿ ವಿಶೇಷಚೇತನರು ಎದುರಿಸುವ ಸವಾಲುಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕ ಬಸ್ಸುಗಳಲ್ಲಿ ಸ್ವತಂತ್ರವಾಗಿ ಪ್ರಯಾಣ ಮಾಡಲು ಸಹಾಯ ಮಾಡುತ್ತದೆ.
ಈ ಸಾಧನವು ಬಸ್ ನಲ್ಲಿ ಅಳವಡಿಸಿರುವ ಸ್ಪೀಕರ್ ಮತ್ತು ರಿಮೋಟ್ ಹೊಂದಿರುತ್ತದೆ. ಬಸ್ ನಿಲ್ದಾಣದ ಹತ್ತಿರ ಬಸ್ಸು ಬಂದಾಗ, ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು, Find ಬಟನ್ ಒತ್ತಿದರೆ, ಬಸ್ಸಿನಲ್ಲಿ ಅಳವಡಿಸಿರುವ ಸ್ಪೀಕರ್ ನಿಂದ ಬಸ್ ಮಾರ್ಗ ಸಂಖ್ಯೆ ಘೋಷಣೆ ಯಾಗುತ್ತದೆ, ಆಗ ಅವರು ಬಸ್ಸನ್ನು ಹತ್ತುತ್ತಾರೆ. ಮತ್ತು ಚಾಲಕ ಮತ್ತು ನಿರ್ವಾಹಕರಿಗೆ ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು ಬಸ್ಸಿಗೆ ಹತ್ತಲು ಬರುತ್ತಿರುವ ಮಾಹಿತಿಯು ದೊರೆಯುತ್ತದೆ. ಆ ವೇಳೆ ಬಸ್ಸನ್ನು ಹೆಚ್ಚಿನ ಕಾಲ ನಿಲ್ಲಿಸುತ್ತಾರೆ.
ಈ ಸಂದರ್ಭದಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ, ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಜಿಲ್ಲೆಯ ಅಧ್ಯಕ್ಷರಾದ ಅರುಣ್, GIZ ಮುಖ್ಯಸ್ಥರಾದ ಮಂಜುನಾಥ್ ಶೇಖರ್ ಅವರು ಹಾಜರಿದ್ದರು.