ಧಾರವಾಡ: ಜಿಲ್ಲೆಯಲ್ಲಿ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಂತ ಯುವಕನನ್ನು ಮೆಚ್ಚಿ ಹೋಗಿದ್ದಂತ ಗೃಹಿಣಿಯೊಬ್ಬಳು, ಆತ್ಮಹತ್ಯೆಗೆ ಶರಣಾಗಿದ್ದಳು. ಈ ಪ್ರಕರಣ ಸಂಬಂಧ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಪರಿಚಿತನಾಗಿದ್ದಂತ ಯುವನನ್ನು ಮೆಚ್ಚಿ, ಪತಿಯನ್ನು ಬಿಟ್ಟು ಬಂದು ಧಾರವಾಡದ ಶ್ರೀನಗರದಲ್ಲಿ ಶ್ವೇತಾ(23) ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಕಳೆದ ಎರಡು ದಿನಗಳ ಹಿಂದೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಪ್ರಕರಣ ಸಂಬಂಧ ಧಾರವಾಡ ಪೊಲೀಸರಿಂದ ಶಿವಳ್ಳಿ ಗ್ರಾಮದ ವಿಜಯ್ ನಾಯ್ಕರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಶ್ವೇತಾ ವಿವಾಹ ವಿಚ್ಛೇಧನಕ್ಕೂ ಕಾರಣವಾಗಿ, ಆತನ ಹಿಂದೆ ಬಂದಿದ್ದಳಂತೆ.
ಅಂದಹಾಗೇ ಶ್ವೇತಾ ಸಾವಿಗೆ ಮುನ್ನ ತನ್ನ ಕೈಯಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂಬುದಾಗಿ ಬರೆದುಕೊಂಡಿದ್ದಳಂತೆ. ಅಂದಹಾಗೇ ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದನು. ಆದರೇ ವಿಜಯ್ ಕುಟುಂಬಸ್ಥರು ಒಪ್ಪದ ಕಾರಣ, ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
Train Accident: ಪಾರ್ಸೆಲ್ ವ್ಯಾನ್ ಗೆ ಡಿಕ್ಕಿ ಹೊಡೆದ ತಿರುಪತಿ ಎಕ್ಸ್ ಪ್ರೆಸ್: ಹಳಿ ತಪ್ಪಿದ ಎರಡು ಬೋಗಿಗಳು