ಬೆಳಗಾವಿ : ಈತ ಅಂತಿಂತ ಕಳ್ಳನಲ್ಲ ಈತನಿಗೆ ಕಡಿಯೋಕೆ ಬಾಲಿವುಡ್ ನಟನ ಸಿನೆಮಾನೇ ಸ್ಫೂರ್ತಿ ಅಂತೇ ಕದ್ದ ಚಿನ್ನ ಬೆಳ್ಳಿ ಹಣದಲ್ಲಿ ಕಾರು ಬೈಕ್ ತಗೊಂಡು ಶೋಕಿ ಮಾಡ್ಕೊಂಡು ಆರಾಮಾಗಿದ್ದ ಆದ್ರೆ ನಮ್ಮ ಪೊಲೀಸರು ಬಿಡ್ಬೇಕು ಅಲಾ ಇದೀಗ ಈತನನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ.
ಹೌದು ಬಂಧಿತನ ಆರೋಪಿಯ ಹೆಸರು ಸುರೇಶ ನಾಯಿಕ. ಬೆಳಗಾವಿಯ ಮಹಾಂತೇಶ ನಗರ ನಿವಾಸಿ ಎಂದು ತಿಳಿದುಬಂದಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ವಿಶ್ವನಾಥ ದುಗ್ಗಾಣಿ ಎಂಬವರ ಮನೆಯಲ್ಲಿ, ಅಕ್ಟೋಬರ್ 18 ಹಾಗೂ 22ರ ಮಧ್ಯೆ ಮನೆಗಳ್ಳತನ ನಡೆದಿತ್ತು. ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ದೋಚಲಾಗಿತ್ತು. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಯಮಕನಮರಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು 89 ಲಕ್ಷ 60 ಸಾವಿರ ರೂ. ಮೌಲ್ಯದ 128 ತೊಲ (1280 ಗ್ರಾಂ) ಚಿನ್ನಾಭರಣ, 5 ಲಕ್ಷ 95 ಸಾವಿರ ರೂ. ಮೌಲ್ಯದ 8.5 ಕಿಲೋ ಬೆಳ್ಳಿ ಆಭರಣ ಹಾಗೂ 1 ಲಕ್ಷ 25 ಸಾವಿರ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಇವುಗಳ ಜೊತೆಗೆ, ವಿವಿಧ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಒಂದು ಥಾರ್ ವಾಹನ, 2 ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.








