ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ನಟ ದರ್ಶನ್ ಬೆನ್ನು ನೋವು ನಿಂದ ಬಳಲುತ್ತಿದ್ದಾನೆ. ಈ ಕುರಿತು ದರ್ಶನ್ ಜೈಲಾಧಿಕಾರಿಗಳಿಗೆ ಪತ್ರ ಬರೆದು ಚಿಕಿತ್ಸೆಗೆ ಮನವಿ ಮಾಡಿಕೊಂಡಿದ್ದಾನೆ.
ದರ್ಶನ್ ಒಂದು ವಾರದಿಂದ ಕುಂಟುತ್ತ ವಾಕ್ ಮಾಡುತ್ತಿದ್ದಾನೆ. ದರ್ಶನ್ ಮನವಿಯಂತೆ ಆರೋಗ್ಯ ತಪಾಸಣೆಗೆ ಜೈಲಾಧಿಕಾರಿಗಳು ಪತ್ರ ಬರೆದಿದ್ದು, ಜೈಲಾಧಿಕಾರಿಗಳು ಸಿ ವಿ ರಾಮನ್ ಆಸ್ಪತ್ರೆಗೆ ಪತ್ರ ಬರೆದಿದ್ದಾರೆ. ತಪಾಸಣೆ ಮಾಡಿದ ವೈದ್ಯರು ದರ್ಶನ್ ಗೆ ಫಿಜಿಯೋಥೆರಫಿ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಫಿಜಿಯೋಥೆರಫಿ ಮಾಡಲು ಮುಂದಾಗಿದ್ದಾರೆ. ವಾರಕ್ಕೆ ನಾಲ್ಕು ಬಾರಿ ಫಿಜಿಯೋಥೆರಪಿ ಅವಶ್ಯಕತೆ ಇದೆ ಅಂತ ವೈದ್ಯರು ಹೇಳಿದ್ದಾರೆ.
ಆದರೆ ಸದ್ಯಕ್ಕೆ ಎರಡು ಬಾರಿ ಮಾತ್ರ ಫಿಜಿಯೋಥೆರಪಿಗೆ ಮುಂದಾಗಿದ್ದಾರೆ ಈಗಾಗಲೇ ವೈದ್ಯರು ಒಂದು ಬಾರಿ ದರ್ಶನ್ಗೆ ಫಿಜಿಯೋಥೆರಫಿ ಮಾಡಿದ್ದಾರೆ ಬೆನ್ನು ನೋವಿನ ಜೊತೆಗೆ ದರ್ಶನ್ ಮೊಣಕೈ ನೋವು ಸಹ ಅಂತ ಹೇಳಿದ್ದಾನೆ. ಈಗ ನೆಲದ ಮೇಲೆ ಮಲಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮೊಣ ಕೈ ನೋವು ಹೆಚ್ಚಾಗಿದೆ. ಶೀತಾಂಶದಿಂದ ದರ್ಶನ ಮೊಣಕೈನಲ್ಲಿ ಮತ್ತೆ ನೋವು ಜಾಸ್ತಿಯಾಗಿದೆ. ಇದಕ್ಕೂ ಸಿ ವಿ ರಾಮನ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.