ತುಮಕೂರು : ತುಮಕೂರಿನಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ದೇವರು ಬಂದಂತೆ ನಾಟಕವಾಡಿ ನವದಂಪತಿಗಳನ್ನು ದೇವಸ್ಥಾನದಿಂದ ಗ್ರಾಮಸ್ಥರು ಹೊರಗಡೆ ಕಳಿಸಿರುವ ಘಟನೆ ವರದಿಯಾಗಿದೆ. ಗೋಣಿ ತುಮಕೂರಿನ ಅರಸಮ್ಮ ದೇಗುಲದಲ್ಲಿ ಈ ಒಂದು ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ನವ ದಂಪತಿಗಳು ದೇಗುಲಕ್ಕೆ ಹೋಗಿದ್ದಾಗ ಗ್ರಾಮಸ್ಥರು ಹೊರ ಕಳುಹಿಸಿದ್ದಾರೆ. ದೇವಾಲಯದ ಒಳಗಿದ್ದ ಮೇಲ್ಜಾತಿ ವ್ಯಕ್ತಿ ದೇವರು ಬಂದಂತೆ ನಟಿಸಿದ್ದಾನೆ. ದೇವಾಲಯಕ್ಕೆ ಬಂದ ದಲಿತ ಕುಟುಂಬವನ್ನು ಹೊರ ಕಳುಹಿಸಿ ಅವಮಾನ ಮಾಡಿದ್ದಾನೆ. ದಲಿತರಿಗೆ ಪ್ರವೇಶವಿಲ್ಲ ಎಂದು ಗದರಿ ನಾರಾಯಣಪ್ಪ ಹೊರ ಕಳುಹಿಸಿದ್ದಾನೆ.
ಗ್ರಾಮಸ್ಥರ ನಡವಳಿಕೆಗೆ ಬೇಸತ್ತು ದಂಪತಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಭಂದ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ ಸೇರಿ ಹಲವರ ವಿರುದ್ಧ FIR ದಾಖಲಾಗಿದೆ. ದೇವರ ಬಂದಂತೆ ನಾಟಕವಾಡಿದ ನಾರಾಯಣಪ್ಪನನ್ನು ಅರೆಸ್ಟ್ ಮಾಡಲಾಗಿದೆ ಉಳಿದ ಆರೋಪಿಗಳಿಗಾಗಿ ತುರುವೇಕೆರೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.








