ಚಿತ್ರದುರ್ಗ : ರಾಜ್ಯದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಪೊದೆಯಲ್ಲಿದ್ದ ಹೆಣ್ಣು ಶಿಶುವನ್ನು ಪಾಪಿಗಳು ಎಸೆದು ಹೋಗಿದ್ದಾರೆ. ಪುಟ್ಟ ಕಂದನ ಅಳುವಿನ ದನಿ ಕೇಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಹೊರಗಿನಿಂದ ಶಿಶು ತಂದು ಪೊದೆಯಲ್ಲಿ ಪಾಪಿಗಳು ಬಿಸಾಡಿ ಹೋಗಿದ್ದಾರೆ. ಸಿಸಿಟಿವಿಯಲ್ಲಿ ಇಬ್ಬರು ಮಹಿಳೆಯರು ಹೊರ ಹೋಗುತ್ತಿರುವ ದೃಶ್ಯ ಸರೆಯಾಗಿದೆ. ವಾಂತಿ ಭೇದಿ ವಾರ್ಡ್ ಕಡೆಯಿಂದ ಹೊರ ಹೋಗಿರುವ ದೃಶ್ಯ ಸೆರೆಯಾಗಿದೆ. ರಾತ್ರಿ 9:56 ಕ್ಕೆ ಇಬ್ಬರು ಬಂದು ಮಗುವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ ಮಹಿಳೆಯರ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ ಮುದ್ದಾದ ಹೆಣ್ಣುಮಗುವಿನ ಆಕರಂದನ ಕಂಡು ಜನ ಮೊಮ್ಮಲಮರು ಇದ್ದಾರೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ