ಕೋಲಾರ : ಆಸ್ತಿಗಾಗಿ ಹೆತ್ತ ತಾಯಿಯ ಮೇಲೆ ಮಗನಿಂದಲೇ ಹಲ್ಲೆ ನಡೆಸಿರುವ ಘಟನೆ ದೇವರ ಸಮುದ್ರ ಗ್ರಾಮದಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯ ಸಮುದ್ರ ಗ್ರಾಮದಲ್ಲಿ ನಾರಾಯಣಮ್ಮ ಮೇಲೆ ಪಾಪಿ ಮಗ ಸುಬ್ರಮಣ್ಯ ಹಲ್ಲೆ ಮಾಡಿದ್ದಾನೆ.
ಫ್ಲೋರ್ ಮಿಲ್ ಹಾಗೂ ಮನೆ ತನಗೆ ಬೇಕು ಎಂದು ಪುತ್ರ ಸುಬ್ರಮಣ್ಯ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆಸ್ತಿಗೋಸ್ಕರ ನಾರಾಯಣನ ಮೇಲೆ ಸುಬ್ರಮಣ್ಯ ಪದೇ ಪದೇ ಹಲ್ಲೆ ಮಾಡಿದ್ದಾನೆ.ಈ ವಿಚಾರವಾಗಿ ದೂರು ನೀಡಿದ್ದರು ಸಹ ಪೊಲೀಸರು ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಮುಳಬಾಗಿಲು ಗ್ರಾಮಾಂತರ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದೆ. ನಾರಾಯಣಮಗೆ ನಾಲ್ಕು ಗಂಡು ಓರ್ವ ಪುತ್ರಿ ಇದ್ದು, ಅದರಲ್ಲಿ ಸುಬ್ರಮಣ್ಯ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ.








