ಕೆಎನ್ಎನ್ ಡಿಜಿಟಲ್ ಡೆಸ್ಕ್ : ಈ ಆಧುನಿಕ ಯುಗದಲ್ಲಿ ಎಲ್ಲೆ ಏನು ನಡೆದರೂ ಸಾಮಾಜಿಕ ಜಾಲತಾಣದಲ್ಲಿ ಕ್ಷಣ ಮಾತ್ರದಲ್ಲಿ ಹಬ್ಬುತ್ತವೆ. ಕೆಲವು ವಿಡಿಯೋಗಳು ಒಳ್ಳೆಯವಾಗಿತ್ತವೆ. ಇನ್ನು ಕೆಲವು ಆಕ್ಷೇಪರ್ಹವಾಗಿತ್ತವೆ. ಅಂತಹದ್ದೆ ವಿಡಿಯೋವೊಂದು ವೈರಲ್ ಆಗಿದೆ.
BIGG NEWS : ಮೈಸೂರಿನಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿ : ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು
ಯುವತಿಯೋರ್ವಳು ರೀಲ್ಸ್ ಮಾಡುವ ವೇಳೆ ನಾಯಿಯನ್ನು ಒದ್ದು, ನಿಂದಿಸಿರುವ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವಿಟ್ಟರ್ ಬಳಕೆದಾರರು ಇನ್ಪ್ಲೂಯೆನ್ಸರ್ ಎಂದು ಕರೆಯಲಾಗುವ ಈ ಯುವತಿ ಸಂವೇದನಾಶೀಲತೆಯನ್ನು ಖಂಡಿಸುತ್ತಿದ್ದು, ಈ ಘಟನೆಯನ್ನು ವರದಿ ಮಾಡಲು ಮತ್ತು ಆಕೆಯ ಖಾತೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
How can you be so insensitive toward these voiceless souls
If you cant love them dont hurt them #AnimalAbuse#DogsOnTwitter pic.twitter.com/8HaC2zD7Ea
— Vidit Sharma 🇮🇳 (@TheViditsharma) November 30, 2022
1.21 ಲಕ್ಷ ಅನುಯಾಯಿಗಳನ್ನು ಹೊಂದಿರುವ ಕಿರಣ್ ಕಾಜಲ್ ಎಂದು ಗುರುತಿಸಲಾದ ಸೋಷಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ ಆಗಿರುವ ಈಕೆಯು ತನ್ನನ್ನು ತಾನು ಪ್ರಾಣಿ ಪ್ರೇಮಿ ಎಂದು ಹೇಳಿಕೊಂಡಿದ್ದಾಳೆ.
ಸೋಶಿಯಲ್ ವಿಡಿಯಾದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಕಿರಣ್ ತನ್ನ ಖಾತೆಯಿಂದ ವಿಡಿಯೋವನ್ನು ಅಳಿಸಿ ಕ್ಷಮೆಯಾಚಿಸಿದ್ದಾರೆ. ವಿಡಿಯೋದಲ್ಲಿ ತಾನು ಪ್ರಾಣಿ ಪ್ರೇಮಿ ಎಂದು ಹೇಳಿಕೊಂಡಿದ್ದಾಳೆ.
ನನ್ನ ಕ್ರೂರ ಕೃತ್ಯಕ್ಕಾಗಿ ನಾನು ವಿಷಾದಿಸುತ್ತೇನೆ. ಇನ್ಮುಂದೆ ನಾನು ಯಾವುದೇ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದಿದ್ದಾರೆ.
ಕಿರಣ್ ಕಾಜಲ್ ಅವರ ಕ್ಷಮೆಯಾಚನೆ ನಂತರ ಅವರು ಅನೇಕ ಟೀಕೆಗಳನ್ನು ಎದುರಿಸಿದ್ದಾರೆ.