ಬೆಂಗಳೂರು : ರಾಜ್ಯದ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳು ಸೇರಿದಂತೆ ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಯಾದ ಬಳಿಕ ರಾಜ್ಯದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಹೇಳಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರಿನ 4 ದಿಕ್ಕಿನಲ್ಲಿ ‘ತ್ಯಾಜ್ಯ ಸಂಸ್ಕರಣ’ ಘಟಕ ಸ್ಥಾಪನೆ :ಹೈಕೋರ್ಟ್ ಗೆ ಕಾಲವಕಾಶ ಕೋರಿದ ಸರ್ಕಾರ
2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ 7,471 ನವಜಾತ ಶಿಶುಮರಣ ಪ್ರಕರಣ ವರದಿಯಾಗಿದ್ದರೆ, 2023ರ ಏಪ್ರಿಲ್‌ನಿಂದ 2024ರ ಜನವರಿವರೆಗೆ 4,546 ಪ್ರಕರಣಗಳು ವರದಿಯಾಗಿವೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ದಾಖಲಾದ ಕನಿಷ್ಠ ಶಿಶು ಮರಣ ಪ್ರಮಾಣ. 2021–22ರಲ್ಲಿ 6,293, 2021–22ರಲ್ಲಿ 6,722 ನವಜಾತ ಶಿಶುಗಳ ಮರಣವಾಗಿತ್ತು.
‘Whats App’ ಬಳಕೆದಾರರಿಗೆ ಗುಡ್ ನ್ಯೂಸ್ : ಈ ಫೀಚರ್ ನಿಂದ ನಿಮ್ಮ ವಾಟ್ಸಾಪ್ ಇನ್ನಷ್ಟು ಸುಭದ್ರವಾಗಲಿದೆ!
2023–24ರಲ್ಲಿ ಮೈಸೂರಿನಲ್ಲಿ 437, ಕೊಪ್ಪಳ–371, ರಾಯಚೂರು–365, ಕಲಬುರಗಿ– 363 ಮತ್ತು ಬಳ್ಳಾರಿಯಲ್ಲಿ 323 ಅತಿ ಹೆಚ್ಚು ಶಿಶು ಮರಣ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ 8, ರಾಮನಗರದಲ್ಲಿ 13 ಮತ್ತು ಹಾವೇರಿ ಯಲ್ಲಿ 18 ಶಿಶು ಮರಣ ಸಂಭವಿಸಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.
ಬೆಳಗಾವಿ : ವೈದ್ಯರ ನಿರ್ಲಕ್ಷದಿಂದ ‘ಬಾಣಂತಿ-ಮಗು’ ಸಾವು : ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರ ಆಗ್ರಹ
ಈ ಮುಂಚೆ ಗ್ರಾಮೀಣ ಪ್ರದೇಶ ಗಳಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುವ ಪ್ರಕರಣಗಳು ಹೆಚ್ಚಾಗಿದ್ದವು. ಇದರಿಂದ ನವಜಾತ ಶಿಶುವಿನ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಇದೀಗ ಆರೋಗ್ಯ ಇಲಾಖೆಯು ತಾಯಿ ಮತ್ತು ಶಿಶುವಿನ ಆರೋಗ್ಯ ಸುಧಾರಣೆಗೆ ಮಹತ್ತರ ಯೋಜನೆಗಳನ್ನು ಕೈಗೊಂಡಿದೆ.