ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ʻಚೆಲೋ ಶೋ(Chhello Show)ʼ ಚಿತ್ರದ ಬಾಲ ನಟ ʻರಾಹುಲ್ ಕೋಲಿ(Rahul Koli)ʼ ಕ್ಯಾನ್ಸರ್ನಿಂದ ಕೊನೆಯುಸಿರೆಳೆದಿದ್ದಾನೆ.
ಚೆಲೋ ಶೋ ಚಿತ್ರದಲ್ಲಿ ನಟಿಸಿದ್ದ ಆರು ಮಕ್ಕಳಲ್ಲಿ ಒಬ್ಬರಾಗಿ ನಟಿಸಿರುವ ರಾಹುಲ್ ಕೋಲಿ ತಮ್ಮ 15 ನೇ ವಯಸ್ಸಿಗೇ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾನೆ.
ಮೂಲಗಳ ಪ್ರಕಾರ, ಅಕ್ಟೋಬರ್ 2 ರಂದು ರಾಹುಲ್ ಕೋಲಿ ಉಪಹಾರ ಸೇವಿಸಿದ ನಂತ್ರ ರಕ್ತವಾಂತಿ ಮಾಡಿಕೊಂಡಿದ್ದ. ಈ ವೇಳೆ ಜ್ವರ ಕೂಡ ಬಂದಿತ್ತು. ನಂತ್ರ ಆತ ಕೊನೆಯುಸಿರೆಳೆದ. ರಾಹುಲ್ ಕೋಲಿಯ ಅಂತ್ಯಕ್ರಿಯೆ ಜಾಮ್ನಗರ ಸಮೀಪದ ಹಪಾ ಗ್ರಾಮದಲ್ಲಿ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು ಕುಟುಂಬ ಮೂಲಗಳು ತಿಳಿಸಿವೆ.
ಚೆಲೋ ಶೋ ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನವೇ ರಾಹುಲ್ ಕೋಲಿ ಕೊನೆಯುಸಿರೆಳೆದಿದ್ದಾನೆ. ಆತನ ನಿಧನಕ್ಕೆ ಚಿತ್ರತಂಡದವರು ಸಂತಾಪ ಸೂಚಿಸಿದ್ದಾರೆ.
BIGG NEWS: ಬೆಂಗಳೂರಿನ ಸೋಮೇಶ್ವರದಲ್ಲಿ ತಲ್ವಾರ್ ಹಿಡಿದು ʼಮುಸ್ಲಿಂ ಮುಖಂಡರ ಡ್ಯಾನ್ಸ್ : 18 ಜನ ಅರೆಸ್ಟ್
BREAKING NEWS : ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ `ನ್ಯಾ. ಪ್ರಸನ್ನ ಬಿ.ವರಾಳೆ’ ನೇಮಕ