ಬೆಂಗಳೂರು: ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಕರ್ನಾಟಕ ಕ್ರಿಕೆಟ್ ಆಟಗಾರ ಅರ್ಜುನ್ ಹೊಯ್ಸಳ ಅವರೊಂದಿಗೆ ನಿಶ್ಚಿತಾರ್ಥ ವಾಗಿದೆ .
32 ವರ್ಷದ ಕರ್ನಾಟಕದ ಅರ್ಜುನ್ ಹೊಯ್ಸಳ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೇದಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಬಹಿರಂಗಪಡಿಸಿದ್ದಾರೆ.
ಪೋಸ್ಟ್ನಲ್ಲಿ ಅರ್ಜುನ್ ಮಂಡಿ ಊರಿ ಭಾರತೀಯ ಮಹಿಳಾ ಕ್ರಿಕೆಟರ್ ಮತ್ತು ಅವರ ದೀರ್ಘಕಾಲದ ಗೆಳತಿ ವೇದಾಗೆ ಪ್ರಪೋಸ್ ಮಾಡುವುದನ್ನು ಕಾಣಬಹುದು. ವೇದಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದರೆ, ಅರ್ಜುನ್ ವೃತ್ತಿಪರ ಕ್ರಿಕೆಟ್ ತರಬೇತುದಾರರಾಗಿದ್ದಾರೆ ಮತ್ತು ಅವರ ರಾಜ್ಯಕ್ಕಾಗಿ ಕ್ರಿಕೆಟ್ ಆಡುತ್ತಾರೆ. 2019ರ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಶಿವಮೊಗ್ಗ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಅರ್ಜುನ್, ಕರ್ನಾಟಕ ಪ್ರೀಮಿಯರ್ ಲೀಗ್ ಸೇರಿದಂತೆ ರಾಜ್ಯ ಟಿ20 ಟೂರ್ನಮೆಂಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್ಮನ್ 2016 ರಲ್ಲಿ ಕರ್ನಾಟಕಕ್ಕಾಗಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು ಕೂಡ ದೇಶಿಯ ಮತ್ತು ಇಂಟರ್ನ್ಯಾಶನಲ್ ಕ್ರಿಕೆಟ್ನಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿಲ್ಲ.