ಚೆನ್ನೈ: ಫೆಬ್ರವರಿಯಲ್ಲಿ ಉಕ್ರೇನ್ನಲ್ಲಿ ಯುದ್ಧ ಆರಂಭವಾದ ನಂತರ ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ಎರಡೂ ದೇಶಗಳಲ್ಲಿ ವೈದ್ಯಕೀಯ ಪಠ್ಯಕ್ರಮ ಒಂದೇ ಆಗಿರುವುದರಿಂದ ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂದು ರಷ್ಯಾ ಗುರುವಾರ ಹೇಳಿದೆ.
“ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ಏಕೆಂದರೆ, ಎರಡೂ ದೇಶಗಳ ವೈದ್ಯಕೀಯ ಪಠ್ಯಕ್ರಮವು ಬಹುತೇಕ ಒಂದೇ ಆಗಿರುತ್ತದೆ. ಉಕ್ರೇನ್ನಲ್ಲಿ ಹೆಚ್ಚಿನವರು ರಷ್ಯನ್ ಭಾಷೆಯನ್ನು ಮಾತನಾಡುತ್ತಾರೆ. ಅವರಿಗೆ ಜನರ ಭಾಷೆ ತಿಳಿದಿದೆ. ರಷ್ಯಾದಲ್ಲಿ ಶಿಕ್ಷಣ ಮುಂದುವರೆಸಲು ಬಯಸುವವರಿಗೆ ನಾವು ಸ್ವಾಗತ ಕೋರುತ್ತೇವೆ ಎಂದು ರಷ್ಯಾದ ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್ ಅವರು ಚೆನ್ನೈನಲ್ಲಿ ಹೇಳಿದರು.
ಫೆಬ್ರವರಿ 2022 ರ ಕೊನೆಯಲ್ಲಿ ಉಕ್ರೇನ್ನ ಮೇಲೆ ರಷ್ಯಾ ದಾಳಿ ಮಾಡಿದಾಗ ಸಾವಿರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸನ್ನು ತೊರೆದು ಪ್ರಾಣ ಉಳಿಸಿಕೊಳ್ಳಲು ತಾಯ್ನಾಡಿಗೆ ಬಂದರು. ಇದೀಗ ಅವರ ಶಿಕ್ಷಣ ಮುಂದುವರೆಸಲು ರಷ್ಯಾ ಈ ಆಫರ್ ನೀಡಿದೆ.
ಮರುಮದುವೆಯಾದ ವಿಚ್ಛೇದಿತ ದಂಪತಿಗಳು: ಇದಕ್ಕೆ ಕಾರಣ ʻEmailʼ… ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಆಧುನಿಕ ‘ಶ್ರವಣ ಕುಮಾರ’: ತಾಯಿಯ ಸ್ಮರಣಾರ್ಥ ದೇವಾಲಯ ನಿರ್ಮಿಸುತ್ತಿರುವ ಮಗ