ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಆಗ್ರಾದ 28 ವರ್ಷದ ಭಾರತೀಯ ವಿದ್ಯಾರ್ಥಿಯು ಕಳೆದ ವಾರ 11 ಬಾರಿ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ದಾಖಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಈ ಘಟನೆ ಅಕ್ಟೋಬರ್ 6 ರಂದು ಪೆಸಿಫಿಕ್ ಹೆದ್ದಾರಿಯಲ್ಲಿ ಅವರು ತಂಗಿದ್ದ ಸ್ಥಳಕ್ಕೆ ಹಿಂದಿರುಗುತ್ತಿದ್ದಾಗ ಸಂಭವಿಸಿದೆ. ಸಂತ್ರಸ್ತನನ್ನು ಶುಭಂ ಗಾರ್ಗ್ ಎಂದು ಗುರುತಿಸಲಾಗಿದ್ದು, ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆಯಲ್ಲಿ ಆತನಿಗೆ
ಮುಖ, ಎದೆ ಮತ್ತು ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿದ ಕಾರಣ ತೀವ್ರ ರಕ್ತಸ್ರಾವವಾಗುದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಇದನ್ನು “ಜನಾಂಗೀಯ” ದಾಳಿ ಎಂದು ಕರೆದ ಆಗ್ರಾ ಮೂಲದ ಅವರ ಪೋಷಕರು ಕಳೆದ ಏಳು ದಿನಗಳಿಂದ ಅವರು ಆಸ್ಟ್ರೇಲಿಯಾಕ್ಕೆ ವೀಸಾ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದನ್ನು ಪಡೆಯಲು ಇನ್ನೂ ಸಾಧ್ಯವಾಗಲಿಲ್ಲ. ಶುಭಂ ಅವರು ಐಐಟಿ ಮದ್ರಾಸ್ನಿಂದ ತಮ್ಮ ಬ್ಯಾಚುಲರ್ ಆಫ್ ಟೆಕ್ನಾಲಜಿ ಮತ್ತು ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ 1 ರಂದು ಆಸ್ಟ್ರೇಲಿಯಾಕ್ಕೆ ತೆರಳಿದರು.
ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಿದ ಕಾವ್ಯಾ ಗಾರ್ಗ್, 28 ವರ್ಷದ ವಿದ್ಯಾರ್ಥಿ ಶುಭಂ ಗಾರ್ಗ್ ಅವರ ಸಹೋದರ ಎಂದು ಹೇಳಿಕೊಂಡಿದ್ದು, ಶುಭಂ ಅವರನ್ನು ನೋಡಿಕೊಳ್ಳಲು ಕುಟುಂಬ ಸದಸ್ಯರು ಸಿಡ್ನಿಗೆ ಹೋಗಲು ತುರ್ತು ವೀಸಾ ಕೋರಿದ್ದಾರೆ. . “ನನ್ನ ಸಹೋದರನಿಗೆ ಅನೇಕ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ ಮತ್ತು ದೇಹದಲ್ಲಿ ಸೋಂಕು ಹರಡುತ್ತಿದೆ ಎಂದು ವೈದ್ಯರು ಹೇಳಿದರು. ಈ ವಿಷಯದ ಬಗ್ಗೆ ತುರ್ತು ಸಹಾಯಕ್ಕಾಗಿ ಪ್ರಧಾನಿ ಮೋದಿ ಅವರನ್ನು ವಿನಂತಿಸುತ್ತಿದ್ದೇನೆ” ಎಂದು ಕಾವ್ಯಾ ಗಾರ್ಗ್ ಗುರುವಾರ ಟ್ವೀಟ್ ಮಾಡಿದ್ದಾರೆ.
My brother Shubham Garg, 28,from UP, was brutually attacked in Sydney, Australia 11 times with knife and he is in critical condition.We seek your immediate help in this matter and emergency visa to family member to look after him.@PMOIndia @myogiadityanath @DrSJaishankar
— Kavya Garg (@KGARG1205) October 12, 2022
ವರದಿಯ ಪ್ರಕಾರ, ಶುಭಂ ಗರ್ಗ್ ಸಹೋದರನ ವೀಸಾ ಅರ್ಜಿ ಪ್ರಕ್ರಿಯೆಯಲ್ಲಿದೆ ಮತ್ತು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಚಾಹಲ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದ 27 ವರ್ಷದ ಡೇನಿಯಲ್ ನಾರ್ವುಡ್ ಎಂಬ ವ್ಯಕ್ತಿಯನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದ್ದು, ಚಾಟ್ಸ್ವುಡ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ತನಿಖೆ ಮುಂದವರೆದಿದೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
VIRAL NEWS : ‘ಮದುವೆ’ ಎಂದರೇನು ? : ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಉತ್ತರ ನೋಡಿ ದಂಗಾದ ಶಿಕ್ಷಕ..!