ಅಮೇರಿಕ: ಅಕ್ಟೋಬರ್ 3 ರಂದು ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಅಪಹರಣಕ್ಕೊಳಗಾದ ನಾಲ್ವರು ಭಾರತೀಯ ಮೂಲದವರು ಹಣ್ಣಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಎಂಟು ತಿಂಗಳ ಮಗು ಅರೂಹಿ ಧೇರಿ, ಆಕೆಯ ತಾಯಿ ಜಸ್ಲೀನ್ ಕೌರ್(27), ತಂದೆ ಜಸ್ದೀಪ್ ಸಿಂಗ್ (36 ) ಮತ್ತು ಆಕೆಯ ಚಿಕ್ಕಪ್ಪ ಅಮನದೀಪ್ ಸಿಂಗ್ (39) ಅವರನ್ನು ಸೋಮವಾರ ಮರ್ಸಿಡ್ ಕೌಂಟಿಯಿಂದ ಅಪಹರಿಸಲಾಗಿತ್ತು. ಇವರು ಪಂಜಾಬ್ನ ಹೋಶಿಯಾರ್ಪುರದವರಾಗಿದ್ದಾರೆ.
ಕುಟುಂಬವು ಅಪಹರಣಕ್ಕೊಳಗಾದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಜಸ್ದೀಪ್ ಮತ್ತು ಅಮನದೀಪ್ ಸಿಂಗ್ ತಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಹೊರಬರುವುದನ್ನು ನೋಡಬಹುದು. ಕೆಲವೇ ಕ್ಷಣಗಳ ನಂತರ, ಕಿಡ್ನಾಪರ್ ಜಸ್ಲೀನ್ ಕೌರ್ ಮತ್ತು ಆಕೆಯ 8 ತಿಂಗಳ ಮಗುವನ್ನು ಕಟ್ಟಡದಿಂದ ಟ್ರಕ್ಗೆ ಕರೆದೊಯ್ಯುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.
The Merced County Sheriff’s Office is holding a press conference Wednesday morning to update the investigation into the kidnapping of a family of four. https://t.co/fCFipdZ7Yi pic.twitter.com/RumlKaaubA
— KGET 17 News (@KGETnews) October 5, 2022
CHILLING: Police have released surveillance video showing the exact moment the Merced family members, including an 8-month-old girl, were kidnapped. https://t.co/xLQUEiNu1a pic.twitter.com/d7HavY9ssL
— ABC7 Eyewitness News (@ABC7) October 5, 2022
ತೋಟದ ಬಳಿಯ ಕೃಷಿ ಕಾರ್ಮಿಕರೊಬ್ಬರು ನಿನ್ನೆ ಸಂಜೆ ಶವಗಳನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಟುಂಬದವರ ಅಪಹರಣದಲ್ಲಿ ಶಂಕಿತ ಜೀಸಸ್ ಮ್ಯಾನುಯೆಲ್ ಸಲ್ಗಾಡೊ ತನ್ನ ಕೈವಾಡವನ್ನು ಒಪ್ಪಿಕೊಂಡಿದ್ದಾನೆ. ಅವನನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿದ್ದಾನೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
BIGG NEWS : ಮೈಸೂರಿನಿಂದ ಬೆಂಗಳೂರಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ | CM Basavaraja Bommai
BIGG NEWS: ಇನ್ನು 6 ವರ್ಷದಲ್ಲಿ ಕಲಿಯುಗ ಅಂತ್ಯ; ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ
BREAKING NEWS: PFI ಮುಖಂಡರ ಬಂಧನ ಕೇಸ್; ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ..!