ವಾಷಿಂಗ್ಟನ್ (ಯುಎಸ್): 2023ರ ಬಜೆಟ್ನಲ್ಲಿ ಬೆಳವಣಿಗೆಯು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಮತ್ತು ಭಾರತದ ಆರ್ಥಿಕತೆಗೆ ಸಿಕ್ಕಿರುವ ಆವೇಗವನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ದೇಶವು ಕೊರೊನಾ ಸಾಂಕ್ರಾಮಿಕದ ನಡುವೆಯೂ ವಿಶ್ವದ 5 ಅಗ್ರ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದೀಗ ಈ ಆರ್ಥಿಕ ಆವೇಗವನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದಿದ್ದಾರೆ.
ವಾಷಿಂಗ್ಟನ್ ಮೂಲದ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಷನ್ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಈ ಮಾತುಗಳನ್ನಾಡಿದ್ದಾರೆ. ಮುಂಬರುವ ಬಜೆಟ್ ಬಹಳ ಪ್ರಮುಖವಾದ ಬಜೆಟ್ ಆಗಿದ್ದು, ಇದರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗವನ್ನು ಇದೇ ಮಾದರಿಯಲ್ಲಿ ಉಳಿಸಿಕೊಳ್ಳಲಾಗುವುದು. ಬಜೆಟ್ನಲ್ಲಿ ಹಣದುಬ್ಬರ ಕಡಿತ ಮಾಡುವ ಬಗ್ಗೆ ಗಮನ ಹರಿಸಲಾಗುವುದು. ಇದರೊಂದಿಗೆ ದೇಶದ ಅಭಿವೃದ್ಧಿಯೂ ಪ್ರಮುಖವಾಗಿದೆ ಎಂದಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಸಚಿವೆ ಸೀತಾರಾಮನ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್, G20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ (FMCBG) ಸಭೆಗಳ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಹಣಕಾಸು ಸಚಿವರು ಜಪಾನ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಭೂತಾನ್, ನ್ಯೂಜಿಲೆಂಡ್, ಈಜಿಪ್ಟ್, ಜರ್ಮನಿ, ಮಾರಿಷಸ್, ಯುಎಇ, ಇರಾನ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
BIGG NEWS : ನಾಳೆ ‘ಹಾಸನಾಂಬ ದೇವಾಲಯ’ ಓಪನ್’ : ಅ. 27ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ | Hasanamba Temple
BIGG NEWS : ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ತಿರಸ್ಕಾರ