ನವದೆಹಲಿ: 2047ರ ವೇಳೆಗೆ ಭಾರತದ ಆರ್ಥಿಕತೆಯು ಚೀನಾದ ಆರ್ಥಿಕತೆಯ ಗಾತ್ರದ ಶೇ.80ರಷ್ಟು ಬೆಳೆಯಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ಅರವಿಂದ್ ಮಾನಿ ಹೇಳಿದ್ದಾರೆ. “ಭಾರತವು ಮುಂದಿನ ಪೀಳಿಗೆಯ ಆರ್ಥಿಕ ಸುಧಾರಣೆಗಳನ್ನು ಉತ್ತಮವಾಗಿ ಜಾರಿಗೆ ತಂದರೆ ಮತ್ತು ಅಂತರರಾಷ್ಟ್ರೀಯ ಆರ್ಥಿಕತೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ನಾವು ಗರಿಷ್ಠವಾಗಿ ಬಳಸಿಕೊಂಡರೆ, ಭಾರತವು ಚೀನಾದ ಆರ್ಥಿಕತೆಯ ಗಾತ್ರಕ್ಕೆ ಹೆಚ್ಚು ಹತ್ತಿರವಾಗಬಹುದು” ಎಂದರು.
ಇದು ಆಶಾವಾದಿ ಸನ್ನಿವೇಶ.ಭಾರತದ ಆರ್ಥಿಕತೆಯು 2047 ರ ವೇಳೆಗೆ ಚೀನಾದ ಆರ್ಥಿಕತೆಗೆ ಸಮನಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅದು ಸಂಭವಿಸಬೇಕಾದರೆ, ಅಂತರರಾಷ್ಟ್ರೀಯ ಆರ್ಥಿಕ ಸನ್ನಿವೇಶವು ಅನುಕೂಲಕರವಾಗಿರಬೇಕು ಮತ್ತು ಭಾರತವು ತನ್ನಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು” ಎಂದು ಅವರು ಹೇಳಿದರು