ಶಿವಮೊಗ್ಗ : ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆನ್‌ಲೈನ್ ನೋಂದಣಿಯು ಮಾರ್ಚ್ 12 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೊರ್ಟಲ್- WWW.JOININDINARMY.NIC.IN ಹಾಗೂ ಆನ್‌ಲೈನ್ ಪರೀಕ್ಷೆಯು ಜೂನ್ 2025 ರಲ್ಲಿ ನಡೆಯುವ ಸಾಧ್ಯತೆಯಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಭಾರತೀಯ ಸೇನೆಯಲ್ಲಿ ಆಯ್ಕೆ ‘ನ್ಯಾಯಯುತ ಮತ್ತು ಪಾರದರ್ಶಕ’ವಾಗಿದ್ದು, ಅರ್ಹತೆ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿ ಆಯ್ಕೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು ಹಾಗೂ ನೇಮಕಾತಿ ಏಜೆಂಟ್‌ಗಳAತೆ ನಟಿಸುವ, ಆಮಿಷ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ ಇಮೇಲ್: aromangalore2021@gmail.com kಸಂಪರ್ಕಿಸಬಹುದಾಗಿದೆ.
ಸುನೀತಾ ವಿಲಿಯಮ್ಸ್ ಈ ದಿನಾಂಕದಂದು ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ತಲುಪುವ ಸಾಧ್ಯತೆ | Sunita Williams
ಭಾರತದಲ್ಲಿ ಶೇ.57ರಷ್ಟು ಕಾರ್ಪೊರೇಟ್ ಪುರುಷರು ವಿಟಮಿನ್ ಬಿ12 ಕೊರತೆ ಎದುರಿಸುತ್ತಿದ್ದಾರೆ: ಸಮೀಕ್ಷೆ