ಸ್ಯಾನ್ ಫ್ರಾನ್ಸಿಸ್ಕೋ: ತನ್ನ ಮಗನಿಗೆ ವಿಚ್ಛೇದನ ನೀಡಲು ಉದ್ದೇಶಿಸಿದ್ದ ಸೊಸೆಯನ್ನು ಮಾವ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಆರೋಪಿಯಾದ 74 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಸಿತಾಲ್ ಸಿಂಗ್ ದೋಸಾಂಜ್ ಅವರು ತಮ್ಮ ಸೊಸೆ ಗುರುಪ್ರೀತ್ ಕೌರ್ ದೋಸಾಂಜ್ ಅವರನ್ನು ಕಳೆದ ವಾರ ಆಕೆ ಕೆಲಸ ಮಾಡುತ್ತಿದ್ದ ವಾಲ್ಮಾರ್ಟ್ನ ದಕ್ಷಿಣ ಸ್ಯಾನ್ ಜೋಸ್ ಪಾರ್ಕಿಂಗ್ ಸ್ಥಳದಲ್ಲಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಗುರ್ಪ್ರೀತ್ ತನ್ನ ಗಂಡನಿಗೆ ವಿಚ್ಛೇದನ ನೀಡುವ ಪ್ರಕ್ರಿಯೆಯಲ್ಲಿದ್ದಳು. ಆದ್ರೆ ಇದು ಮಾವ ಸಿತಾಲ್ ಸಿಂಗ್ ದೋಸಾಂಜ್ಗೆ ಇಷ್ಟವಿರಲಿಲ್ಲ. ಮಗ ಹಾಗೂ ಸಿತಾಲ್ ಫ್ರೆಸ್ನೋದಲ್ಲಿ ವಾಸಿಸುತ್ತಿದ್ದರು ಮತ್ತು ರ್ಪ್ರೀತ್ ಸ್ಯಾನ್ ಜೋಸ್ನಲ್ಲಿ ವಾಸಿಸುತ್ತಿದ್ದರು.
Watch Video: ಮದುವೆಯ ದಿನ ವಧುವಿನೊಂದಿಗೆ ಕುಣಿದು ಕುಪ್ಪಳಿಸಿದ ಸಾಕು ನಾಯಿ!… ಶ್ವಾನ ಪ್ರಿಯರು ಫಿದಾ!