ನವದೆಹಲಿ : ತಂತ್ರಜ್ಞಾನದ ಸಹಾಯದಿಂದ ಕೃಷಿ ಕ್ಷೇತ್ರದ ಆಧುನೀಕರಣವನ್ನ ಬಲವಾಗಿ ಪ್ರತಿಪಾದಿಸಿದ ಪ್ರಧಾನಿ ಮೋದಿ, ಭಾರತವು ಸ್ವಾವಲಂಬಿಯಾಗುವುದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಬಹುದು ಎಂದು ಹೇಳಿದರು.
ನೀತಿ ಆಯೋಗದ ಅತ್ಯುನ್ನತ ಸಂಸ್ಥೆಯಾದ ಆಡಳಿತ ಮಂಡಳಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಂ, ಸುಗಮ ಜೀವನ, ಸೇವೆಗಳ ಪಾರದರ್ಶಕ ಪೂರೈಕೆ ಮತ್ತು ಜೀವನದ ಗುಣಮಟ್ಟವನ್ನ ಸುಧಾರಿಸಲು ತಂತ್ರಜ್ಞಾನದ ಬಳಕೆಯ ವಿಷಯಕ್ಕೆ ಬಂದರೆ ತ್ವರಿತ ನಗರೀಕರಣವು ಭಾರತದ ದೌರ್ಬಲ್ಯಕ್ಕಿಂತ ಹೆಚ್ಚಾಗಿ ಒಂದು ಶಕ್ತಿಯಾಗಬಹುದು ಎಂದು ಹೇಳಿದರು. ಖಾದ್ಯತೈಲಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬಿಗಳಾಗುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಅದೇ ಸಮಯದಲ್ಲಿ, ಮುಂದಿನ ವರ್ಷ ಭಾರತವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜಿ-20 ಗುಂಪಿನ ಅಧ್ಯಕ್ಷರಾಗುವ ವಿಷಯದ ಬಗ್ಗೆಯೂ ಪ್ರಧಾನಮಂತ್ರಿಯವರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು. ಜಿ-20 ಗಾಗಿ ಮೀಸಲಾದ ತಂಡಗಳನ್ನ ರಚಿಸುವಂತೆ ರಾಜ್ಯಗಳನ್ನ ಒತ್ತಾಯಿಸಿದ ಅವ್ರು, ಈ ಉಪಕ್ರಮದಿಂದ ಗರಿಷ್ಠ ಪ್ರಯೋಜನವನ್ನ ಪಡೆಯುವಲ್ಲಿ ಇದು ಪರಿಣಾಮಕಾರಿಯಾಗಬಹುದು ಎಂದು ಹೇಳಿದರು.