ಮೈಸೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ( Bharat Jodo Yatra) ನಡೆಯುತ್ತಿರುವುದರಿಂದ ಅ.1ರಂದು ಚಾಮರಾಜನಗರ ಜಿಲ್ಲೆಯ ಬೇಗೂರಿನಿಂದ ನಂಜನಗೂಡು ತಾಲೂಕಿನ ಕಳಲೆ ಗ್ರಾಮಕ್ಕೆ ಪಾದಯಾತ್ರೆ ಆಗಮಿಸಿ ನಂತರ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಕಳಲೆಯಿಂದ ಎಂಐಟಿ ಕಾಲೇಜಿಗೆ ಬಂದು ಅಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಅ. 2ರಂದು ವಾಹನದ ಮೂಲಕ ಎಂಐಟಿ ಕಾಲೇಜಿನಿಂದ ಬದನವಾಳು ಗ್ರಾಮಕ್ಕೆ ತೆರಳಿ, ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ನಂಜನಗೂಡಿನಿಂದ ಕಡಕೊಳಕ್ಕೆ ಆಗಮಿಸಿ, ಕಡಕೊಳದಿಂದ ಪಾದಯಾತ್ರೆ ಮೂಲಕ ಮೈಸೂರು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಮೈಸೂರು ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲ ಸಂಚಾರ ಮಾರ್ಗಗಳನ್ನು ಬದಲಾಯಿಸಿದೆ.
ಸೆ.30ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ನಂಜನಗೂಡು ಪಟ್ಟಣದ ಅಪೋಲೋ ವೃತ್ತ (ಬಿ.ಡಿ.ಓ ಸರ್ಕಲ್) ಕಡೆಯಿಂದ – ಗೋಳೂರು – ಬದನವಾಳು – ಕವಲಂದೆ – ಬದನಗುಪ್ಪೆ – ಚಾಮರಾಜನಗರ ಮುಖಾಂತರ ಗುಂಡ್ಲಪೇಟೆ ಕಡೆಗೆ ಸಂಚರಿಸಬಹುದಾಗಿದೆ.