ಹಾಸನ : ನಮಗೆ ಬೇಕಾಗಿರೋದು ಭ್ರಷ್ಟ ಸರ್ಕಾರ ತೆಗೆದು 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು .ಸೀಟು ಹಂಚಿಕೆಯಲ್ಲಿ ಯಾವುದೇ ರೀತಿಯಾಗಿ ಗೊಂದಲ ಇಲ್ಲ.ನಮಗೆ ಎಷ್ಟು ಸೀಟು ಅನ್ನೋದು ಮುಖ್ಯವಲ್ಲ . ಕಳೆದ 75 ವರ್ಷಗಳಿಂದ ರಾಜ್ಯದ ಜನತೆಗೆ ಏನು ಅನ್ಯಾಯ ಆಗಿದೆಯೋ ಅದನ್ನು ಸರಿಪಡಿಸುವ ಉದ್ದೇಶ ಎನ್.ಡಿಎ ಹಾಗೂ ನಮ್ಮ ಪಕ್ಷಕ್ಕಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯ ಚೆನ್ನಂಗಿಹಳ್ಳಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಮೋದಿ ಮೂರನೇ ಬಾರಿ ಪ್ರಧಾನಿ ಆಗುವುದನ್ನು ಯಾರು ತಪ್ಪಿಸಲು ಆಗುವುದಿಲ್ಲ ಎಂದು ಹಾಸನ ಜಿಲ್ಲೆಯ ಚೆನ್ನಾಗಿಹಳಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು ಬಿಜೆಪಿ ಜೆಡಿಎಸ್ ಮೈತ್ರಿ ಹಂಚಿಕೆಯ ಬಗ್ಗೆ ಸಮಸ್ಯೆ ಇಲ್ಲ ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ನಮ್ಮಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ ಆದರೆ ಅದಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ. ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ ಜಿಲ್ಲೆಯ ಪ್ರತಿದಿನ ಒಂದು ಧಾರಾವಾಹಿ ಇರಲೇಬೇಕು ಪಾಪ ನಿಖಿಲ್ ಅಮಾಯಕ.ನಿಖಿಲ್ ಅನ್ನು ರಾಜಕೀಯವಾಗಿ ಮುಗಿಸಲು ಯಾವ ರೀತಿ ಮಾಡಿದ್ರು? ಕಳೆದ ಒಂದು ತಿಂಗಳಿನಿಂದ ಮಂಡ್ಯ ಜಿಲ್ಲೆಯಲ್ಲಿ ಧಾರಾವಾಹಿ ನಡೆಯುತ್ತಿದೆ.ನಿಖಿಲ 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಯಾವ ರೀತಿ ಧಾರಾವಾಹಿ ಸೃಷ್ಟಿಸಿದರು ಎಂದು ಆಕ್ರೋಶ ಹೊರಹಾಕಿದರು.
ನಿಖಿಲ್ ರಾಜಕೀಯ ಬೆಳವಣಿಗೆಯನ್ನ ಸಂಪೂರ್ಣವಾಗಿ ನಾಶ ಮಾಡಿಬಿಟ್ಟರು. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಸೀಟು ಪಡೆಯಬೇಕಾಗಿಲ್ಲ ರಾಜಕಾರಣ ನಿಂತ ನೀರಲ್ಲ. ಯಾವುದೇ ರೀತಿಯಾಗಿ ಇನ್ನೊಬ್ಬರಿಗೆ ವೈಯಕ್ತಿಕವಾಗಿ ತೊಂದರೆ ಕೊಟ್ಟು ಸೀಟು ಪಡೆಯುವ ಉದ್ದೇಶ ಇಲ್ಲ ಎಂದು ಕಿಡಿಕಾರಿದರು.
ಹಾಸನದಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು ಎಂದು HDK ಹೇಳಿಕೆ ನೀಡಿದ್ದು, ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಎಂದು ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದರು. ಪ್ರೀತಂ ಗೌಡ ಯುವಕರಿದ್ದಾರೆ,ಉತ್ಸಾಹದಲ್ಲಿ ಮಾತನಾಡುತ್ತಾರೆ. ಅವರನ್ನೇ ನಿಲ್ಲಿಸುವುದಾದರೆ ಆ ಕುರಿತು ಮುಂದೆ ಚರ್ಚೆ ಮಾಡೋಣ ಎಂದು ಅವರು ತಿಳಿಸಿದರು.
ಅವರನ್ನೇ ನಿಲ್ಲಿಸಬೇಕೆಂದರೆ ನಿಲ್ಲಿಸೋಣ ನಾವು ಅವರು ಅಣ್ಣತಮ್ಮರ ರೀತಿ ಹೋಗಬೇಕಲ್ಲ. ಪಾಪ ಮಾತಿನ ಬಿರುಸಲಿ ಪ್ರೀತಂ ಗೌಡ ಏನೇನೋ ಮಾತನಾಡುತ್ತಾರೆ ಅವರು ಕೂಡ ನನ್ನ ತಮ್ಮಂದಿರ ಹಾಗೆ ಎಲ್ಲ ಸರಿ ಮಾಡಿಕೊಳ್ಳುತ್ತೇವೆ ಏನು ಸಮಸ್ಯೆ ಇಲ್ಲ ಎಂದು ತಿಳಿಸಿದರು.