ದೆಹಲಿ: ಕರೋನ ವೈರಸ್ ವಿರುದ್ಧ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ಅನ್ನು ಪ್ರಾರಂಭಿಸಿದ ಒಂದು ವರ್ಷದ ನಂತರ ಭಾರತವು 2 ಬಿಲಿಯನ್ ಲಸಿಕೆ ಡೋಸ್ಗಳನ್ನು ನೀಡುವ ಮೂಲಕ ದೊಡ್ಡ ಮೈಲಿಗಲ್ಲನ್ನು ದಾಟಿದೆ.
ಭಾರತ 200 ಕೋಟಿ ಕೋವಿಡ್ ವ್ಯಾಕ್ಸಿನ್ ನೀಡಿ ದಾಖಲೆ ಸೃಷ್ಟಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ, “ಭಾರತ ಮತ್ತೆ ಇತಿಹಾಸವನ್ನು ಸೃಷ್ಟಿಸುತ್ತದೆ! 200 ಕೋಟಿ ಲಸಿಕೆ ಡೋಸ್ಗಳ ವಿಶೇಷ ಅಂಕಿಅಂಶವನ್ನು ದಾಟಿದ್ದಕ್ಕಾಗಿ ಎಲ್ಲಾ ಭಾರತೀಯರಿಗೆ ಅಭಿನಂದನೆಗಳು. ಭಾರತದ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಮಾಣ ಮತ್ತು ವೇಗದಲ್ಲಿ ಸಾಟಿಯಿಲ್ಲದಂತೆ ಮಾಡಲು ಕೊಡುಗೆ ನೀಡಿದವರ ಬಗ್ಗೆ ಹೆಮ್ಮೆಯಿದೆ. ಇದು ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿದೆ” ಎಂದಿದ್ದಾರೆ.
India creates history again! Congrats to all Indians on crossing the special figure of 200 crore vaccine doses. Proud of those who contributed to making India’s vaccination drive unparalleled in scale and speed. This has strengthened the global fight against COVID-19. https://t.co/K5wc1U6oVM
— Narendra Modi (@narendramodi) July 17, 2022
ಭಾರತವು ಕೇವಲ 18 ತಿಂಗಳಲ್ಲಿ 200 ಕೋಟಿ ಲಸಿಕೆಗಳ ಗುರಿಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಸಾಧನೆಗಾಗಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ವಿಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ.
17th July 2022, a day to remember forever. #200CroreVaccinations https://t.co/FtobFYBprV
— Dr Mansukh Mandaviya (@mansukhmandviya) July 17, 2022
ಶುಕ್ರವಾರ ಸರ್ಕಾರಿ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್ ಡೋಸ್ ನೀಡುವುದನ್ನು ಪ್ರಾರಂಭಿಸಲಾಗಿದೆ. 75 ದಿನಗಳವರೆಗೆ ಈ ಅಭಿಯಾನ ದೇಶಾದ್ಯಂತ ಮುಂದುವರೆಯಲಿದೆ.
Breaking news: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಪಿ.ವಿ ಸಿಂಧುಗೆ ಚಾಂಪಿಯನ್ ಪಟ್ಟ