ನವದೆಹಲಿ: ಚೀನಾ, ಜಪಾನ್, ಅಮೇರಿಕಾ ಸೇರಿದಂತೆ ವಿವಿಧ ವಿದೇಶಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ಮುಂದಿನ 35 ರಿಂದ 40 ದಿನಗಳಲ್ಲಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಅವಧಿಯನ್ನು ಎದುರಿಸುವುದು ಅತ್ಯಂತ ನಿರ್ಣಾಯಕವಾಗಲಿದೆ. ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಇನ್ನೂ 40 ದಿನಗಳಲ್ಲಿ ಕೋವಿಡ್ ಸೋಂಕು ನಿರ್ಣಾಯಕ ಹಂತವನ್ನು ತಲುಪುವ ಸಾಧ್ಯತೆ ಭಾರತದಲ್ಲಿ ಇರೋ ಕಾರಣ, ಕೇಂದ್ರ ಸರ್ಕಾರದಿಂದ ಸೋಂಕನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸೋ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನಲಾಗುತ್ತಿದೆ.
ಹಿಂದಿನ ಅಲೆಗಳ ವೇಳೆ ಭಾರತದಲ್ಲಿ ಎಚ್ಚರಿಕೆಯ ನಡುವೆಯೂ ಸೋಂಕು ಹೆಚ್ಚಳಗೊಂಡಿತ್ತು. ಹೀಗಾಗಿ ಇನ್ನೂ 40 ದಿನಗಳ ಕಾಲ ಎಚ್ಚರಿಕೆ ವಹಿಸೋ ಅಗತ್ಯವನ್ನು ಆರೋಗ್ಯ ಸಚಿವಾಲಯ ಸೂಚಿಸಿದೆ.
ಅದರಲ್ಲೂ ಜನವರಿಯಲ್ಲಿ ಕೊರೋನಾ ಸೋಂಕು ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೇ ಕೋವಿಡ್ ಸೋಂಕು ಹೆಚ್ಚಳದಿಂದ ಯಾವುದೇ ಅಪಾಯವಿಲ್ಲ ಎಂಬುದಾಗಿಯೂ ಹೇಳಲಾಗುತ್ತಿದೆ.