ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂಡೋನೇಷ್ಯಾದ ಬಾಲಿಯಲ್ಲಿ 2022ರ ಶೃಂಗಸಭೆ ನಡೆಯುತ್ತಿದೆ. ಪ್ರದಾನಿ ಓದಿ ಸೇರಿದಂತೆ ವಿವಿಧ ದೇಶದ ನಾಯಕರು ಭಾಗವಹಿಸಿದ್ದಾರೆ.
BIGG NEWS : ಭಯೋತ್ಪಾದನೆ ಮಟ್ಟ ಹಾಕಲು ‘ಮೋದಿ’ ಮಾಸ್ಟರ್ ಪ್ಲ್ಯಾನ್ ; ಉಗ್ರರ ‘ಹಣದ ಮೂಲ’ ಹತ್ತಿಕ್ಕಲು ಯತ್ನ
ಇಂದು ಮಂಗಳವಾರ ಭಾರತೀಯ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು,. ಭಾರತೀಯ ವಲಸಿಗರ ಸಾಧನೆಗಳು ನಮಗೆ ಹೆಮ್ಮೆ ತರುತ್ತವೆ. ಭಾರತ ಮತ್ತು ಇಂಡೋನೇಷ್ಯಾ ಹಂಚಿಕೆಯ ಪರಂಪರೆ ಮತ್ತು ಸಂಸ್ಕೃತಿಯಿಂದ ಸಂಪರ್ಕ ಹೊಂದಿವೆ ಎಮದ ಮೋದಿ ಹೇಳಿದ್ದಾರೆ.
ಭಾಷಣ ಮಾಡಲು ಪ್ರಧಾನಿ ಮೋದಿವರು ಹೋಗುತ್ತಿದ್ದಂತೆ ಮೋದಿ ಮೋದಿ ಘೋಷಣೆಗಳೊಂದಿಗೆ ಗಣ್ಯರು ಸ್ವಾಗತಿಸಿದರು. ಮೋದಿ ಅವರು ಸ್ಥಳದಲ್ಲಿ ಸಾಂಪ್ರದಾಯಿಕ ಇಂಡೋನೇಷಿಯಾದ ಸಂಗೀತ ವಾದ್ಯಗಳನ್ನು ಭಾರಿಸಲು ಪ್ರಯತ್ನಿಸಿದರು ಎನ್ನಲಾಗುತ್ತಿದೆ
ನಾನು ಬಾಲಿಯಲ್ಲಿ ನಿಮ್ಮೊಂದಿಗೆ ಮಾತನಾಡುವಾಗ ಮತ್ತು ನಾವು ಇಂಡೋನೇಷಿಯನ್ ಸಂಪ್ರದಾಯಗಳ ಹಾಡುಗಳನ್ನು ಹಾಡುತ್ತೇವೆ. ಇಲ್ಲಿಂದ 1500 ಕಿಮೀ ದೂರದಲ್ಲಿರುವ ಭಾರತದ ಕಟಕ್ನಲ್ಲಿ ಬಲಿ ಯಾತ್ರಾ ಮಹೋತ್ಸವವು ನಡೆಯುತ್ತಿದೆ. ಬಲಿ ಜಾತ್ರೆ. ಈ ಮಹೋತ್ಸವವು ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತ-ಇಂಡೋನೇಷ್ಯಾ ವ್ಯಾಪಾರ ಸಂಬಂಧಗಳನ್ನು ಆಚರಿಸುತ್ತದೆ ಎಂದು ಮೋದಿ ಭಾರತೀಯ ಸಮುದಾಯ ಸಮಾರಂಭದಲ್ಲಿ ಹೇಳಿದ್ದಾರೆ.
ಕೋವಿಡ್-19 ಕಾರಣದಿಂದ ಉದ್ಭವಿಸಿದ ಸಮಸ್ಯೆಗಳಿಂದಾಗಿ ಕೆಲವು ಅಡೆತಡೆಗಳು ಉಂಟಾಗಿವೆ. ಹಲವು ವರ್ಷಗಳ ನಂತರ, ಒಡಿಶಾದಲ್ಲಿ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಬಲಿ ಜಾತ್ರಾ ಮಹೋತ್ಸವವನ್ನು ಬೃಹತ್ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.