ಪಣಜಿ: ಆಯುರ್ವೇದವನ್ನು ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ಸಾಧನ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ಭವಿಷ್ಯದ ದೃಷ್ಟಿಕೋನವನ್ನು ವಿಶ್ವದ ಮುಂದೆ ಇಟ್ಟಿದೆ ಅಂತ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಆಯುಷ್ ಸಚಿವಾಲಯ ಆಯೋಜಿಸಿದ್ದ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (ಡಬ್ಲ್ಯುಎಸಿ)ಯಲ್ಲಿ ಭಾಗವಹಿಸಿ ಮಾತನಾಡಿದರು.
ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಯುರ್ವೇದದ ಧ್ಯೇಯವಾಕ್ಯವೆಂದರೆ ಎಲ್ಲರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯ. ಆಯುರ್ವೇದವು ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ. ಆಯುರ್ವೇದವು ಕೇವಲ ಚಿಕಿತ್ಸೆಗೆ ಸಂಬಂಧಿಸಿದ್ದಲ್ಲ, ಇದು ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ. ಯೋಗ ಮತ್ತು ಆಯುರ್ವೇದವು ಜಗತ್ತಿಗೆ ಹೊಸ ಭರವಸೆಯಾಗಿದೆ. ನಾವು ಆಯುರ್ವೇದದ ಫಲಿತಾಂಶ ಮತ್ತು ಪರಿಣಾಮವನ್ನು ಹೊಂದಿದ್ದೇವೆ, ಆದರೆ ಪುರಾವೆಗಳ ವಿಷಯದಲ್ಲಿ ನಾವು ಹಿಂದುಳಿದಿದ್ದೇವೆ. ಆದ್ದರಿಂದ, ಇಂದು ನಾವು ದತ್ತಾಂಶ ಆಧಾರಿತ ಪುರಾವೆ’ಯ ದಾಖಲೀಕರಣವನ್ನು ಮಾಡಬೇಕಾಗಿದೆ. ಆಯುರ್ವೇದವು ನಮಗೆ ಹೇಗೆ ಬದುಕಬೇಕೆಂದು ಕಲಿಸುತ್ತದೆ ಆಂತ ತಿಳಿಸಿದರು.