ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಮತ್ತೊಮ್ಮೆ ಉಗ್ರರು ಏನಾದರೂ ದಾಳಿ ಮಾಡಿದರೆ ಭಾರತದ ಪ್ರತಿ ದಾಳಿ ಇನ್ನೂ ಘೋರವಾಗಿರುತ್ತದೆ. ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತಿದೆ. ಉಗ್ರರು ಪಾಕಿಸ್ತಾನದೊಳಗೆ ಅಡಗಿದರು ಸಹ ನುಗ್ಗಿ ಹೊಡೆಯುತ್ತೇವೆ ಭಾರತೀಯ ಸೇನೆಯ ಕಾರ್ಯ ಕ್ಷಮತೆ ಅದ್ಭುತವಾಗಿದೆ ಎಂದರು.
ಆಪರೇಷನ್ ಸಿಂಧೂರ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆ ಅಲ್ಲ. ನಿಮ್ಮ ಶೌರ್ಯ ಪ್ರತಿಧ್ವನಿ ಎಲ್ಲೆಡೆ ಕೇಳಿ ಬರುತ್ತಿದೆ. ಉಗ್ರರ ಸದೆಬಡೆಯುವದಾಗಿ ಭಾರತ ಲಕ್ಷ್ಮಣ ರೇಖೆ ಎಳೆದಿದೆ. ಭಾರತದ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಆಗಿದೆ. ಭಾರತೀಯ ಸೇನೆಗೆ ಆಧುನಿಕ ತಂತ್ರಜ್ಞಾನದ ಶಕ್ತಿ ಇದೆ. ಪಾಕಿಸ್ತಾನದ ಸೇನೆಯನ್ನು ನಮ್ಮ ಸೇನೆ ಧೂಳಿಪಟ ಮಾಡಿದೆ. ಆಪರೇಷನ್ ಸಿಂಧೂರ ಒಂದು ತ್ರಿವೇಣಿಯಾಗಿದೆ. ನಮ್ಮ ದಾಳಿಯಿಂದ ಪಾಕಿಸ್ತಾನದವರಿಗೆ ಇನ್ನು ಸರಿಯಾಗಿ ನಿದ್ದೆ ಬರುತ್ತಿಲ್ಲ ಪಾಕಿಸ್ತಾನದಲ್ಲೂ ಈಗ ಉಗ್ರರಿಗೆ ಯಾವುದೇ ಸುರಕ್ಷಿತ ತಾಣವಿಲ್ಲ ಏಕೆಂದರೆ ಉಗ್ರರು ಎಲ್ಲೇ ಅಡಗಿದ್ದರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದರು.
ಉಗ್ರರು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದರು. ಸಿಂಧೂರ ಅಳಿಸಿದ್ದ ಉಗ್ರರನ್ನು ಸದೆ ಬಡಿದಿದ್ದೇವೆ. ಉಗ್ರರನ್ನು ಭಾರತೀಯ ಸೇನೆ ಮಣ್ಣಲ್ಲಿ ಹೂತುಹಾಕಿದೆ. ಭಾರತೀಯ ಸೇನೆ ಉಗ್ರ ಹುಟ್ಟಡಗಿಸಿದೆ. ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಉಗ್ರರ ಮಹಾವಿನಾಶ ಇಲ್ಲಿಂದ ಆರಂಭವಾಗಿದೆ. ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದೇವೆ.
ಪಾಕಿಸ್ತಾನಕ್ಕೆ ತಿನ್ನುವುದಕ್ಕೆ ಅನ್ನವಿಲ್ಲ ಆದರೆ ಉಗ್ರರನ್ನು ಪೋಷಿಸುತ್ತಿದೆ. 100ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದೇವೆ. ಪಾಕಿಸ್ತಾನದ ಒಳಗೆ ನುಗ್ಗಿ ಭಾರತೀಯ ಸೇನಾಪಡೆ ಉಗ್ರರನ್ನು ಹೊಡೆದಿದೆ. ಡ್ರೋನ್ ಮತ್ತು ಜೆಟ್ ವಿಮಾನಗಳನ್ನು ಹೊಡೆದುರಿಸಿಳಿದ್ದೇವೆ. ನಮ್ಮ ವೀರಯೋಧರು ಎಲ್ಲಿ ಪಾದ ಇಡುತ್ತಾರೋ ನಿಮ್ಮ ಪರಾಕ್ರಮವನ್ನು ಇಡೀ ವಿಶ್ವವೇ ನೋಡಿದೆ. ವೀರ ಯೋಧರಿಗೆ ನನ್ನ ಸೆಲ್ಯೂಟ್. ಭಾರತವನ್ನು ಕೆಣಕಿದರೆ ಯಾರಿಗೂ ಉಳಿಗಾಲವಿಲ್ಲ. ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದೆ. 20 ನಿಮಿಷದಲ್ಲಿ ಪಾಕಿಸ್ತಾನ ಗಡಿದಾಟಿ ಹೊಡೆದಿದ್ದೇವೆ. ಪಾಕಿಸ್ತಾನ ಇದನ್ನು ಕೂಡ ಮಾಡಿರಲಿಲ್ಲ. ಭಾರತೀಯ ಸೈನಿಕರ ಶಕ್ತಿಗೆ ಪಾಕಿಸ್ತಾನ ತಬ್ಬಿಬ್ಬುಗೊಂಡಿದೆ. ಉಗ್ರರ ಹೆಡ್ ಕ್ವಾಟರ್ಸ ಮಾಡಲಾಗಿದೆ.