ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಭಾರತವು 63,734 ಡೋಸ್ ಇನ್ಫ್ಲುಯೆನ್ಸ ಮತ್ತು ಮೆನಿಂಜೈಟಿಸ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆ ತಲುಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, “ಅಫ್ಘಾನಿಸ್ತಾನದ ಸಾರ್ವಜನಿಕ ಆರೋಗ್ಯವನ್ನು ಬೆಂಬಲಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ. ಭಾರತವು ಕಾಬೂಲ್ಗೆ 63,734 ಡೋಸ್ ಇನ್ಫ್ಲುಯೆಂಜಾ ಮತ್ತು ಮೆನಿಂಜೈಟಿಸ್ ಲಸಿಕೆಗಳನ್ನು ತಲುಪಿಸಿದೆ” ಎಂದಿದ್ದಾರೆ.
ಕಳೆದ ವಾರ, ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಭಾರತವು ಕಾಬೂಲ್ಗೆ 73 ಟನ್ ಜೀವ ಉಳಿಸುವ ಔಷಧಿಗಳು, ಲಸಿಕೆಗಳು ಮತ್ತು ಅಗತ್ಯ ಪೂರಕಗಳನ್ನು ತಲುಪಿಸಿತು.
ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಖಾತೆಯಲ್ಲಿ “ಅಫ್ಘಾನಿಸ್ತಾನದ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುತ್ತಿದ್ದೇವೆ. ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಭಾರತವು 73 ಟನ್ ಜೀವ ಉಳಿಸುವ ಔಷಧಿಗಳು, ಲಸಿಕೆಗಳು ಮತ್ತು ಅಗತ್ಯ ಪೂರಕಗಳನ್ನು ಕಾಬೂಲ್ಗೆ ತಲುಪಿಸಿದೆ. ಆಫ್ಘನ್ ಜನರಿಗೆ ಭಾರತದ ಅಚಲ ಬೆಂಬಲ ಮುಂದುವರಿಯುತ್ತದೆ.” ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಭಾರತ ಆಹಾರ ಪದಾರ್ಥಗಳನ್ನು ತಲುಪಿಸಿದೆ ಎಂದು ವಿದೇಶಾಂಗ ಸಚಿವಾಲಯ ನವೆಂಬರ್ 3 ರಂದು ತಿಳಿಸಿದೆ. ಜೈಸ್ವಾಲ್ ಅವರು ಭಾರತ ಕಳುಹಿಸಿದ ನೆರವಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.








