ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆ ದಯಾ ಭೆಲ್ ಹತ್ಯೆಯ ನಂತರ ಭಾರತವು ತನ್ನ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಅರಿಂದಮ್ ಬಾಗ್ಚಿ, ನಾವು ಅದರ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಆದರೆ ಪ್ರಕರಣದ ಬಗ್ಗೆ ನಮಗೆ ನಿರ್ದಿಷ್ಟ ವಿವರಗಳಿಲ್ಲ. ಆದರೆ ಪಾಕಿಸ್ತಾನವು ತನ್ನ ಅಲ್ಪಸಂಖ್ಯಾತರನ್ನು ಅವರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮದ ಜೊತೆಗೆ ರಕ್ಷಿಸುವಂತೆ ಒತ್ತಿ ಹೇಳಿದ್ದಾರೆ.
We don't have any specific details on this report. Pakistan is responsible for the safety & security of minorities in their country: MEA spokesperson Arindam Bagchi on Hindu woman murdered in Pakistan pic.twitter.com/QNjoK6kqs3
— ANI (@ANI) December 29, 2022
ಪಾಕಿಸ್ತಾನದ ಸಿಂಜೋರೋ ಪಟ್ಟಣದಲ್ಲಿ ಬುಧವಾರ ಹಿಂದೂ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. 40 ವರ್ಷದ ಮಹಿಳೆಯ ತಲೆ ಕಡಿದು ಆಕೆಯ ಸ್ತನವನ್ನು ಕತ್ತರಿಸಲಾಗಿದೆ.
ಈ ಬಗ್ಗೆ ಹಿಂದೂ ಸಮುದಾಯದ ಪಾಕಿಸ್ತಾನದ ಮೊದಲ ಮಹಿಳಾ ಸೆನೆಟರ್ ಕೃಷ್ಣ ಕುಮಾರಿ ಟ್ವೀಟ್ ಮಾಡಿದ್ದು, ದಯಾ ಭೇಲ್ ಎಂಬ 40 ವರ್ಷದ ವಿಧವೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ದೇಹವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿದೆ ಮತ್ತು ಅನಾಗರಿಕರು ಇಡೀ ಮಾಂಸವನ್ನು ತೆಗೆದುಹಾಕಿದ್ದಾ ಎಂದು ಹೇಳಿದ್ದಾರೆ.
ಬಲಿಪಶುವಿನ ದೇಹ ಮತ್ತು ಮುಖದಿಂದ ಚರ್ಮವನ್ನು ಸುಲಿದಿದೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕ ಹೇಳಿದ್ದಾರೆ. ಮಹಿಳೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಅಮೆರಿಕದಲ್ಲಿ 10 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ, ಒಂದೇ ವಾರದಲ್ಲಿ 48 ಸಾವಿರ ಮಕ್ಕಳ ಮೇಲೆ ಪರಿಣಾಮ, ಅನೇಕ ಜನ ಸಾವು
BIGG NEWS : ಕುತೂಹಲ ಕೆರಳಿಸಿದ ‘ಪಂಚಮಸಾಲಿ ಮೀಸಲಾತಿ’ ವಿಚಾರ : ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ..?
BIGG NEWS : ‘ಸುಮಲತಾ’ ಬಿಜೆಪಿ ಸೇರ್ಪಡೆ ಕುರಿತು ‘ಸಿ.ಪಿ ಯೋಗೇಶ್ವರ್’ ಸ್ಪೋಟಕ ಹೇಳಿಕೆ