ಕೆಎನ್ಎನ್ಡಿಜಿಟಲ್ ಡೆಸ್ಕ್ : T20 ವಿಶ್ವಕಪ್ 2022 ಪ್ರಾರಂಭವಾಗಿದ್ದು, ಟೂರ್ನಿಯ ಬಹುಚರ್ಚಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ನಗರದ ಬೀದಿಗಳನ್ನ ಅತ್ಯುತ್ತಮ ವರ್ಣಚಿತ್ರಗಳಿಂದ ಅಲಂಕರಿಸಲಾಗಿತ್ತು. ಮೆಲ್ಬೋರ್ನ್ನ ಬೀದಿಗಳಲ್ಲಿ ಟೀಂ ಇಂಡಿಯಾ ಆಟಗಾರರ ಪೇಂಟಿಂಗ್ಗಳನ್ನ ಮಾಡಲಾಗಿದೆ. ಈ ಸ್ಟ್ರೀಟ್ ಆರ್ಟ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ. ಆದ್ರೆ, ಈ ಪಂದ್ಯದಲ್ಲಿ ಮಳೆ ವಿಲನ್ ಆಗಬಹುದು. ಹವಾಮಾನ ಇಲಾಖೆ ಪ್ರಕಾರ ಭಾನುವಾರ ಮಳೆಯಾಗುವ ಸಾಧ್ಯತೆ ಇದೆ. ಈ ಪಂದ್ಯಕ್ಕೂ ಮುನ್ನ ಮೆಲ್ಬೋರ್ನ್ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಚಿತ್ರಗಳನ್ನ ಚಿತ್ರಿಸಲಾಗಿದೆ. ಇದರ ವಿಡಿಯೋವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ.
Welcome to Melbourne @BCCI 🇮🇳
We've decided to mark the occasion by creating a@ICC @T20WorldCup street art mural ft. @ImRo45, @imVkohli, @hardikpandya7 & the @MCG 🏏
See you in📍Higson Lane for a quick 📸? We'll bring the coffee! #T20WorldCup #INDvPAK pic.twitter.com/qFIgERD58n
— Melbourne, Australia (@Melbourne) October 21, 2022
ಗಮನಾರ್ಹವಾಗಿ, ಟೀಂ ಇಂಡಿಯಾ ಇತ್ತೀಚೆಗೆ ವಿಕ್ಟೋರಿಯಾದ ಗವರ್ನರ್ ಲಿಂಡಾ ಡೆಸ್ಸು ಅವರನ್ನು ಭೇಟಿ ಮಾಡಿತ್ತು. ಈ ವೇಳೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಸೇರಿದಂತೆ ಇಡೀ ತಂಡ ಹಾಜರಿದ್ದರು. ಭಾರತೀಯ ಆಟಗಾರರು ಔಪಚಾರಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಆಟಗಾರರು ಟೀಂ ಇಂಡಿಯಾದ ಬ್ಲೇಜರ್ ಧರಿಸಿದ್ದರು. ಇನ್ನು ರೋಹಿತ್ ರಾಜ್ಯಪಾಲರಿಗೆ ಟೀಂ ಇಂಡಿಯಾ ಜೆರ್ಸಿಯನ್ನ ಉಡುಗೊರೆಯಾಗಿ ನೀಡಿದ್ದರು. ಅದರ ವೀಡಿಯೋ ಕೂಡ ಟ್ವೀಟ್ ಮಾಡಿದ್ದಾರೆ. ಇದನ್ನು ಸುಮಾರು 4 ಸಾವಿರ ಮಂದಿ ಲೈಕ್ ಮಾಡಿದ್ದಾರೆ.