ಚಿತ್ರದುರ್ಗ: ಪೋಕ್ಸ್ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀಗಳಿಗೆ ಸಂಕಷ್ಟ ಎದುರಾಗಿದೆ. ಇದೀಗ ಪೀಠಾಧಿಪತಿಗಳ ಬದಲಾವಣೆ ಒತ್ತಡ ಹೆಚ್ಚಾಗಿದೆ. ನಿನ್ನೆಯಷ್ಟೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಇದೀಗ ನಾನಾ ಸುದ್ದಿಗಳು ಮಠದ ಆವರಣದಲ್ಲಿ ಹರಡಿದೆ. ಸರ್ಕಾರ ಕೂಡ ಶ್ರೀಗಳ ಬದಲಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದೆ.
ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ : ಸಿಎಂ ಬಸವರಾಜ ಬೊಮ್ಮಾಯಿ
ನೂತನ ಪೀಠಾಧಿಪತಿಗಳ ರೇಸ್ನಲ್ಲಿ ಆರು ಸ್ವಾಮೀಜಿಗಳಿದ್ದಾರೆ. ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್ ಬಿ ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಲಾಗಿದೆ. ಮುರುಘಾ ಶ್ರೀಗಳು ಅಧಿಕೃತವಾಗಿ ನೋಟರಿ ಮಾಡಿ ಪವರ್ ಆಫ್ ಅಟಾರ್ನಿ ನೀಡಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಎಸ್ ಜೆ ಎಂ ವಿದ್ಯಾಪೀಠದ ಚೆಕ್ ಸಹಿ ಸೇರಿ ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ಪವರ್ ಆಫ್ ಅಟಾರ್ನಿ ನೀಡಲಾಗಿದೆ.
ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ : ಸಿಎಂ ಬಸವರಾಜ ಬೊಮ್ಮಾಯಿ
ಹೊಸ ಪೀಠಾಧಿಪತಿ ಯಾರಾಗ್ತಾರೆ?
*ಮಲ್ಲಿಕಾರ್ಜುನ ದೇವರು- ಸರ್ಪಭೂಷಣ ಮಠ, ಬೆಂಗಳೂರು
*ಮಹಾಂತ ರುದ್ರೇಶ್ವರ ಶ್ರೀ- ಹೆಬ್ಬಾಳ ಮಠ
* ಬಸವಪ್ರಭು ಶ್ರೀ- ವಿರಕ್ತ ಮಠ, ದಾವಣಗೆರೆ
* ಶಾಂತವೀರ ಶ್ರೀ- ಗುರುಮಿಠ್ಕಲ್ ಮಠ, ಯಾದಗಿರಿ
* ಶಿವಬಸವ ಶ್ರೀ- ಅಥಣಿ ಮಠ, ಬೆಳಗಾವಿ
* ಸಿದ್ಧರಾಮ ಶ್ರೀ- ಇಳಕಲ್ ಮಠ
ಮುರುಘಾ ಶ್ರೀಗಳ ವಿರುದ್ಧ ಎರಡನೇ ಎಫ್ಐಆರ್ ದಾಖಲಾಗ್ತಿದ್ದಂತೆ ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಇರುವ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿತ್ತು.