ಬೆಂಗಳೂರು : ರಾಜ್ಯದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಜೋರಾಗಿ ನಡೆಯುತ್ತಿದ್ದು, ಇಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಉಪಹಾರ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾತನಾಡಿ ನನ್ನ ಮನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರನ್ನು ಕರೆಯುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಅಗತ್ಯ ಬಿದ್ರೆ ನಮ್ಮ ಮನೆಗೂ ಬ್ರೇಕ್ಫಾಸ್ಟ್ ಗೆ ಕರೆಯುತ್ತೇನೆ. ಇಬ್ಬರನ್ನು ನನ್ನ ಮನೆಗೆ ಬ್ರೇಕ್ ಫಾಸ್ಟ್ ಗೆ ಯಾಕೆ ಕರೆಯಬಾರದು? ಪಕ್ಷದಲ್ಲಿ ಸದ್ಯ ಎಲ್ಲವೂ ತಿಳಿಯದೆ ಖುಷಿಯ ವಾತಾವರಣ ಇದೆ. 2ನೇ ಬಾರಿಯೂ ನನ್ನ ಕರೆದಿಲ್ಲ. ಬ್ರೇಕ್ ಫಾಸ್ಟ್ ಗೆ ನನ್ನ ಕರೆದಿದ್ದರೆ ಹೋಗುತ್ತಿದ್ದೆ ಎಂದು ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್ ಸಿಎಂ ಆಗಲಿ ಎಂದು ಅಭಿಮಾನಿಗಳು ಮುಡಿ ವಿಚಾರವಾಗಿ ಎಲ್ಲ ನಾಯಕರ ಅಭಿಮಾನಿಗಳಿಗೆ ಸಿಎಂ ಆಗಲಿ ಅಂತ ಆಸೆ ಇರುತ್ತದೆ ತಮ್ಮ ನಾಯಕರು ಮುಖ್ಯಮಂತ್ರಿ ಆಗಲಿ ಅಂತ ಆಸೆ ಇರುತ್ತದೆ ಎಂದು ಜಿ ಪರಮೇಶ್ವರ್ ತಿಳಿಸಿದರು.








