ಚಿಕ್ಕಬಳ್ಳಾಪುರ: ವೀಕೆಂಡ್ ಬಂದ್ರೆ ಸಾಕು ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸಿಗರೇ ದಂಡೇ ಹರಿದು ಬರುತ್ತೆ. ಇಂಥ ಗಿರಿಧಾಮದಲ್ಲಿ ಕೋತಿಗಳ ಉಪಟಳ ಹೆಚ್ಚಾಗಿದ್ದು, ಪ್ರವಾಸಿ ಗರ ಮೇಲೆಯೇ ರೌಡಿಸಂ ವರ್ತನೆಗೆ ಮಂಕಿಗಳ ಹಾವಳಿಗೆ ಮುಕ್ತಿ ಕೊಡಿಸಿ ಎಂದು ಪ್ರವಾಸಿಗರು ಒತ್ತಾಯ ಮಾಡುತ್ತಿದ್ದಾರೆ
ಮಳವಳ್ಳಿ ಬಾಲಕಿ ರೇಪ್ & ಮರ್ಡರ್ ಕೇಸ್ : 14 ದಿನಗಳೊಳಗೆ ದೋಷಾರೋಪ ಪಟ್ಟಿ ; ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ ಘೋಷಣೆ
ಪ್ರವಾಸಿಗರ ಕೈಯಲ್ಲಿರೋ ಐಸ್ ಕ್ರೀಂ ಕಿತ್ತುಕೊಂಡು ಸವಿತಿರೋ ಕೋತಿಗಳು. ಮತ್ತೊಂದೆಡೆ ಪ್ರವಾಸಿಗರ ಬ್ಯಾಗ್ಗೆ ಹೊಂಚು ಹಾಕ್ತಿರೋ ಕೋತಿಗಳು. ಹೀಗೆ ಪ್ರವಾಸಿಗರ ಬೆನ್ನಿಗೆ ಬಿದ್ದು ಕೋತಿಗಳು ಉಪಟಳ ಕೊಡ್ತಿರೋದು ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ. ಹೌದು.. ನಂದಿಬೆಟ್ಟದಲ್ಲಿ ಕೋತಿಗಳದ್ದೇ ರಾಜ್ಯಭಾರ. ಎಲ್ಲೆಲ್ಲೂ ದಂಡು ದಂಡಾಗಿ ಕಾಣೋ ಕೋತಿ ಗಳು ಪ್ರವಾಸಿಗರಿಗೆ ಕೊಡಬಾರದ ಕಾಟ ಕೊಡ್ತಿವೆ. ಪ್ರವಾಸಿಗರು ನಂದಿಬೆಟ್ಟದಲ್ಲೂ ಏನೂ ತಿನ್ನಂಗಿಲ್ಲ. ಏನೇ ತಿಂಡಿ ತಿನಿಸು ಕೈಯಲ್ಲಿದ್ರೂ ಚಂಗನೆ ಎದುರಿಗೆ ಬರೋ ಕೋತಿಗಳು ಬಲವಂತವಾಗಿಯೇ ಕಿತ್ತುಕೊಂಡು ಹೋಗ್ತವೆ.
ಮಳವಳ್ಳಿ ಬಾಲಕಿ ರೇಪ್ & ಮರ್ಡರ್ ಕೇಸ್ : 14 ದಿನಗಳೊಳಗೆ ದೋಷಾರೋಪ ಪಟ್ಟಿ ; ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ ಘೋಷಣೆ
ಇಷ್ಟಲ್ಲದೇ ಪ್ರವಾಸಿಗರ ಮೇಲೆ ಮುಗಿಬಿಳೋ ಕೋತಿಗಳು ಕೈಯಲ್ಲಿರೋ ಐಸ್ ಕ್ರೀ. ಚಾಕ್ಲೇಟ್, ಬಿಸ್ಕೆಟ್ ಏನೇ ಆಗಲಿ ಬಿಡೋದಿಲ್ಲ. ಕೊಡಲಿಲ್ಲ ಅಂದ್ರೆ ಮೈಮೇಲೆ ಎರಗ್ತವೆ. ಕೈಯಲ್ಲಿ ಕವರ್, ಬ್ಯಾಗ್ ಏನೇ ಇಡ್ಕೊಂಡು ಹೋದ್ರೂ ಅದನ್ನೇ ಹಿಂಬಾಲಿಸ್ತವೆ. ಇದರಿಂದ ಯಾಕಪ್ಪ ಇಲ್ಲಿಗೆ ಬಂದ್ವಿ ಅನ್ನೋ ಬೇಸರ ಪ್ರವಾಸಿಗರಿಗೆ ಮೂಡ್ತಿದೆ.
ಮಳವಳ್ಳಿ ಬಾಲಕಿ ರೇಪ್ & ಮರ್ಡರ್ ಕೇಸ್ : 14 ದಿನಗಳೊಳಗೆ ದೋಷಾರೋಪ ಪಟ್ಟಿ ; ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ ಘೋಷಣೆ