ವಿಜಯಪುರ: ಭಾರಿ ಮಳೆಯಿಂದ ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ. ಹೀಗಾಗಿ ಭೀಮಾ ನದಿ ತೀರದ ಬಳಿ ಗ್ರಾಮಸ್ಥರಿಗೆ ಕಟ್ಟೆಚ್ಚರ ಬವಹಿಸುವಂತೆ ಸೂಚನೆ ನೀಡಲಾಗಿದೆ. ಉಮರಾಣಿ ಗ್ರಾಮದಲ್ಲಿ ಡಂಗೂರದ ಮೂಲಕ ಕಟ್ಟೆಚ್ಚರ ವಹಿಸಿದೆ.
BIGG NEWS: 4 ವರ್ಷಗಳ ಬಳಿಕ ಜಗನ್ನಾಥ ದೇಗುಲದ ಖಜಾನೆ ತೆರೆಯಬೇಕೆಂಬ ಬೇಡಿಕೆ ಪುನರುಚ್ಚರಿಸಿದ ASI
ಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಉಮರಾಣಿ ಸೇತುವೆ ಮುಳುಗಡೆ ಸಾಧ್ಯತೆ ಇದೆ.ನದಿ ತೀರದಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಜನ ಜಾನುವಾರುಗಳು ನದಿ ತೀರಕ್ಕೆ ಹೋಗದಂತೆ ಡಂಗೂರ ಸಾರಲಾಗಿದೆ.ಉಮರಾಣಿ ಸೇತುವೆ ಮೇಲೆ ಸಂಚರಿಸದಂತೆ ಎಚ್ಚರ ವಹಿಸಲಾಗಿದೆ.
BIGG NEWS: 4 ವರ್ಷಗಳ ಬಳಿಕ ಜಗನ್ನಾಥ ದೇಗುಲದ ಖಜಾನೆ ತೆರೆಯಬೇಕೆಂಬ ಬೇಡಿಕೆ ಪುನರುಚ್ಚರಿಸಿದ ASI
ಉಮರಾಣಿ ಸೇತುವೆ, ಹಿಂಗಣಿ ಬ್ರಿಡ್ಜ್, ತಾವರಖೇಡ ಗ್ರಾಮ ಸೇರಿದಂತೆ ಭೀಮಾ ತೀರಕ್ಕೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಡಿ ಉಪವಿಭಾಗಾಧಿಕಾರಿ, ಇಂಡಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ನೋಡಲ್ ಅಧಿಕಾರಿಗಳ ಭೇಟಿ ನೀಡಿದ್ದಾರೆ. ನದಿ ತೀರದ ಗ್ರಾಮದ ಜನತೆಯೊಂದಿಗೆ ಚರ್ಚಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳುವಳಿಕೆ ವಹಿಸಿದ್ದಾರೆ.