ಹಾಸನ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಹಾಸನಾಂಬೆ ದೇವಿಯ ಜಾತ್ರಾಮಹೋತ್ಸವವು ಒಂದಾಗಿದೆ. ಈ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಶುಕ್ರವಾರದ ಎರಡೇ ದಿನಗಳಲ್ಲಿ ದೇವಾಲಯಕ್ಕೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ.
ಹಾಸನಾಂಬೆ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಗುರುವಾರದಿಂದ ಆರಂಭಗೊಂಡಿದೆ. ಶುಕ್ರವಾರಕ್ಕೆ ಎರಡನೇ ದಿನವಾಗಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ 300 ರೂಪಾಯಿಯ ವಿಶೇಷ ದರ್ಶನದ ಆನ್ ಲೈನ್ ಟಿಕೆಟ್ 4,499 ಸೇಲ್ ಆಗಿದ್ದರೇ, ದೇವಸ್ಥಾನದ ಬಳಿಯಲ್ಲೇ 23,260 ಸೇಲ್ ಆಗಿದೆ. ಒಟ್ಟು 300 ರೂಪಾಯಿಗಳ 27,759 ಟಿಕೆಟ್ ಮಾರಾಟವಾಗಿದೆ.
ಇನ್ನೂ 1000 ರೂಪಾಯಿಯ ಟಿಕೆಟ್ ಗಳು ಆನ್ ಲೈನ್ ಮೂಲಕ 3,912 ಮಾರಾಟವಾಗಿದ್ದರೇ, ಭೌತಿಕವಾಗಿ 8,484 ಮಾರಾಟವಾಗಿದ್ದಾವೆ. ಒಟ್ಟು 12,396 ಟಿಕೆಟ್ 1000 ರೂಪಾಯಿಗಳದ್ದು ಮಾರಾಟವಾಗಿದ್ದಾವೆ. ಇದಲ್ಲದೇ ಮಾರಾಟವಾದ ಲಡ್ಡು ಪ್ರಸಾದ 17,337 ಆಗಿದೆ.
ಹೀಗಿದೆ ಹಾಸನಾಂಬ, ಸಿದ್ದೇಶ್ವರ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಮಾರಾಟವಾದ ಟಿಕೆಟ್ ಹಾಗೂ ಬಂದ ಹಣದ ವಿವರ
ದಿನಾಂಕ 12-10-2025ರ ಬೆಳಗ್ಗೆ 8 ಗಂಟೆಯವರೆಗೆ ರೂ.300ರ 27.759 ಟಿಕೆಟ್ ಮಾರಾಟವಾಗಿದ್ದು, ಇದರಿಂದ 83,27,700 ರೂಪಾಯಿ ಹಣ ಸಂಗ್ರಹವಾಗಿದೆ. ರೂ.1000 ಮೌಲ್ಯದ 12,396 ಟಿಕೆಟ್ ಮಾರಾಟವಾಗಿದ್ದು, ಇದರಿಂದ 1,23,96,000 ಹಣ ಸಂಗ್ರಹವಾಗಿದೆ.
ಇನ್ನೂ ಲಡ್ಡು ಪ್ರಸಾದವು 17,337 ಮಾರಾಟವಾಗಿದ್ದು, ಇದರಿಂದ 17,33,700 ಆದಾಯ ಬಂದಿದೆ. ಒಟ್ಟು ಇಂದು ಬೆಳಗ್ಗೆ 8 ಗಂಟೆಯವರೆಗೆ ರೂ.2,24,57,400 ಹಣವು ಸಂಗ್ರಹವಾದಂತೆ ಆಗಿದೆ.
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion