ಬೆಂಗಳೂರು: ನೌಕರರ ಭವಿಷ್ಯ ನಿಧಿ (ಪಿಎಫ್)ಯಲ್ಲಿ ವಿದೇಶಿ ಕಾರ್ಮಿಕರನ್ನು ಸೇರಿಸುವುದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಶಾಸನಾತ್ಮಕ ತಿದ್ದುಪಡಿಯ ಮೂಲಕ ವಿದೇಶಿ ಕಾರ್ಮಿಕರಿಗೆ ಪಿಎಫ್ ಮತ್ತು ಪಿಂಚಣಿ ವ್ಯಾಪ್ತಿಯನ್ನು ವಿಸ್ತರಿಸಿದ 15 ವರ್ಷಗಳ ನಂತರ ನ್ಯಾಯಾಲಯ ಇದನ್ನು ಹೇಳಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಯಿಂದ ವಿರೋಧವನ್ನು ಎದುರಿಸುವ ನಿರೀಕ್ಷೆಯಿರುವ ಈ ತೀರ್ಪು, ಸಾಮಾಜಿಕ ಭದ್ರತಾ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದ ಅಥವಾ ಪ್ರಸ್ತುತ ನೋಂದಾಯಿಸಿಕೊಂಡಿರುವ ಹಲವಾರು ವಲಸಿಗರ ಮೇಲೆ ಪರಿಣಾಮ ಬೀರುತ್ತದೆ ತೀರ್ಪಿನ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಶಿಕ್ಷಣ, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಪ್ರತಿನಿಧಿಸುವ ಅರ್ಜಿದಾರರು, ಇಪಿಎಫ್ ನಿಬಂಧನೆಗಳು ಕಾನೂನಿನ ಮುಂದೆ ಸಮಾನತೆಯನ್ನು ತಿಳಿಸುವ ಸಂವಿಧಾನದ 14 ನೇ ವಿಧಿಯೊಂದಿಗೆ ಸಂಘರ್ಷದಲ್ಲಿದೆ ಎಂದು ವಾದಿಸಿದರು.